ಹುಬ್ಬಳ್ಳಿ : ರೀಲ್ಸ್ ಮಾಡಿ ಎಚ್ಚರಿಕೆ ನೀಡುತ್ತಿದ್ದ ಸಂದೀಪ್ ಎಂಬ ಯುವಕನನ್ನು ಪುಡಿ ರೌಡಿಗಳು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಆರೋಪಿಗಳಾದ ಪ್ರಜ್ವಲ್ ಗಾಯಕವಾಡ, ಮಂಜುನಾಥ್ ಅಂಗಡಿ ಮತ್ತು ಮಂಜುನಾಥ್ ಎಂಬುವವರು ಹಲ್ಲೆ ನಡೆಸಿದ್ದಾರೆ. ರೀಲ್ಸ್ ಮಾಡುವಾಗ ಸಂದೀಪ್ ಪ್ರಜ್ವಲ್ ಎಂಬಾತನ ತಾಯಿಗೆ ಈತ ಕೆಟ್ಟದಾಗಿ ಬೈದಿದ್ದನು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಜ್ವಲ್ ಎಂಬಾತನ ತಾಯಿಗೆ ಅತ್ಯಂತ ಕೆಟ್ಟದಾಗಿ ಬೈದಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಪ್ರಜ್ವಲ್ ತನ್ನ ಸಹಚರರ ಜೊತೆ ಸೇರಿಕೊಂಡು ಸಂದೀಪ್ ನ್ನು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂದೀಪ್ ಎಂಬ ಯುವಕ ಇನ್ ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಿದ್ದನು. ಹುಬ್ಬಳ್ಳಿಗೆ ನಾನೇ ಡಾನ್ ಎಂದು ರೀಲ್ಸ್ ಮಾಡಿ ವಿಡಿಯೋ ಹರಿಬಿಟ್ಟಿದ್ದನು .