alex Certify ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!

Bhagyashree pushes fans to add peas to their diet, lists these health  benefits | Health - Hindustan Times

ಇನ್‍ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಹೊಸ ವಿಡಿಯೊದೊಂದಿಗೆ ಕಾಣಿಸಿಕೊಂಡಿರುವ ನಟಿ ಭಾಗ್ಯಶ್ರೀ ಅವರು ಕೈನಲ್ಲಿ ಬಟಾಣಿ ತುಂಬಿದ ತಟ್ಟೆಯನ್ನು ಹಿಡಿದು ಕುಳಿತಿದ್ದಾರೆ.

ಅವರ ಪ್ರಕಾರ, ಬಟಾಣಿಯೇ ನಮ್ಮ ಮನೆಯ ಅಡುಗೆ ಕೋಣೆಯಲ್ಲಿರುವ ‘ರತ್ನಮಣಿಗಳಂತೆ’! ಅಂದರೆ, ಬಟಾಣಿಯಲ್ಲಿ ವಿಟಮಿನ್ ಎ, ಬಿ, ಸಿ, ಜಿಂಕ್, ಪೊಟಾಶಿಯಮ್ ಸೇರಿದಂತೆ ಹಲವು ಪೋಷಕಾಂಶಗಳು ಇರುವ ಕಾರಣ ನಿತ್ಯ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದಿದ್ದಾರೆ ನಟಿಮಣಿ.

ಸಸ್ಯಹಾರಿಗಳ ಜಗತ್ತಿನಲ್ಲಿ ಪ್ರೋಟೀನ್‍ಗಳ ಉತ್ತಮ ಮೂಲವಾಗಿ ಬಟಾಣಿ ಕಾಳು ಆಹಾರಪ್ರಿಯರಿಗೆ ಹತ್ತಿರವಾಗುತ್ತಿರುವುದು ಕೂಡ ಹೌದು.

ತಮ್ಮ ಬ್ಯೂಟಿ ಸಿಕ್ರೇಟ್ ರಿವಿಲ್ ಮಾಡಿದ ಬಾಲಿವುಡ್ ನಟಿ ಭಾಗ್ಯಶ್ರೀ

52 ವರ್ಷದ ನಟಿಮಣಿಯು ಇಂದಿಗೂ ಬಳ್ಳಿಯಂತೆ ಮೈಮಾಟ, ಮುಖದಲ್ಲಿ ಚರ್ಮದ ಸೌಂದರ್ಯವನ್ನು ತರುಣಿಯಂತೆ ಕಾಪಾಡಿಕೊಂಡಿರುವ ಕಾರಣ ಅವರ  ಟಿಪ್ಸ್ ಗಳನ್ನು ನಾವು ಅನುಸರಿಸಿದರೆ ತಪ್ಪಿಲ್ಲ, ಅಲ್ಲವೇ…?

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...