ದಕ್ಷಿಣ ಬ್ಯಾಂಕಾಕ್ನ ಸ್ಯಾಮಟ್ನಲ್ಲಿರುವ ಫೀಲ್ಡ್ ಆಸ್ಪತ್ರೆಯಲ್ಲಿ ನಿನ್ನೆ ಅತಿರೇಕದ ಲೈಂಗಿಕತೆ, ಜಗಳ ಹಾಗೂ ಡ್ರಗ್ ಬಳಕೆ ಮಿತಿಮೀರಿದ ಹಿನ್ನೆಲೆಯಲ್ಲಿ ಪುರುಷ ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸ್ಯಾಮಟ್ ಪ್ರಾ ರೌಮಜೈನಲ್ಲಿ 5 ನಿವಾಸವಿದ್ದು ಇಲ್ಲಿ ಸರಿ ಸುಮಾರು 1000ಕ್ಕೂ ಅಧಿಕ ರೋಗಿಗಳು ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರೋಗಿಗಳು ಸಾಮೂಹಿಕ ಲೈಂಗಿಕ ಕ್ರಿಯೆ, ಮಾದಕ ದ್ರವ್ಯ ವ್ಯಸನ ಹಾಗೂ ಕಿತ್ತಾಟಗಳಲ್ಲೇ ಭಾಗಿಯಾಗಿದ್ದಾರೆ.
ಈ ಪ್ರಕರಣಗಳು ಮಿತಿಮೀರಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಅಕ್ರಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪುರುಷ ವಿಭಾಗ ಹಾಗೂ ಮಹಿಳೆಯರ ವಿಭಾಗ ಎಂದು ರಚಿಸಲು ನಿರ್ಧಾರ ಕೈಗೊಂಡಿದ್ದಾರೆ.
ಈ ಅಕ್ರಮಗಳಲ್ಲಿ ಭಾಗಿಯಾಗಿರುವ ರೋಗಿಗಳು ಮತ್ತೊಮ್ಮೆ ಇಂತಹ ನಡವಳಿಕೆಯನ್ನು ಪುನರಾವರ್ತಿಸಿದಲ್ಲಿ ಅಂತವರನ್ನು ಬೇರೆಯ ವೈದ್ಯಕೀಯ ಚಿಕಿತ್ಸೆ ನೀಡುವ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.