![](https://kannadadunia.com/wp-content/uploads/2022/12/983211-central-govt-employees.jpg)
ಬೆಂಗಳೂರು : ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಇಲಾಖಾ ವ್ಯಾಪ್ತಿಯ ಕೇಂದ್ರ ಕಛೇರಿ, ಪ್ರಾದೇಶಿಕ ಕಛೇರಿಗಳು ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ದಿನಾಂಕ 30.12.2023ರಂದು ಬೆಳಗ್ಗೆ 10.00 ಗಂಟೆಗೆ ಕೇಂದ್ರ ಕಛೇರಿಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ರಬೇತಿಗೆ ಹಾಜರಾಗುವ ಸಿಬ್ಬಂದಿಗಳಿಗೆ ಹಾಜರಾತಿ ಪ್ರಮಾಣಪತ್ರ ಸಲ್ಲಿಸುವ ಷರತ್ತಿಗೊಳಪಟ್ಟು, ಸದರಿ ದಿನಾಂಕದಂದು ಅನ್ಯ ಕಾರ್ಯ ನಿಮಿತ್ತ ಮಂಜೂರು ಮಾಡಲಾಗಿದೆ. ಅಸಕ್ತ ನೌಕರರು ಕಛೇರಿ ಮುಖ್ಯಸ್ಥರ ಪೂರ್ವಾನುಮತಿಯೊಂದಿಗೆ ಸದರಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.
![](https://kannadadunia.com/wp-content/uploads/2023/12/WhatsApp-Image-2023-12-28-at-6.49.17-PM.jpeg)