ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9:00 ಗಂಟೆಗೆ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರವಾಹಿ ಕಾಮಿಡಿ ಹಾಗೂ ಎಮೋಷನ್ ಮೂಲಕವೇ ಭರ್ಜರಿಯ ಯಶಸ್ಸು ಕಂಡಿದ್ದು, ಜನಪ್ರಿಯ ಧಾರವಾಹಿಯಾಗಿ ಹೊರಹೊಮ್ಮಿದೆ. ಈ ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಪೂರೈಸಿದ್ದು, ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಧಾರಾವಾಹಿಯಲ್ಲಿ ಆಸಿಯಾ ಫಿರ್ದೋಸ್, ಅಮೋಘ್ ಸೇರಿದಂತೆ ಮೋಹನ್, ಕೀರ್ತಿ ವೆಂಕಟೇಶ್, ಬಾಲ್ರಾಜ್, ಸ್ನೇಹ, ಅಪೂರ್ವ, ಭವಾನಿ ಪ್ರಕಾಶ್, ಅಭಿನಯಿಸಿದ್ದು, ರೇಣುಕಾ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ನೀಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.