
ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 45 ರೂಪಾಯಿಗಳ ಲಾಭ ಸಿಕ್ಕಿದೆ. ಇದರ ಷೇರುಗಳು ಬಿಎಸ್‌ಇಯಲ್ಲಿ 319 ರೂಪಾಯಿಗೆ ಲಿಸ್ಟ್ ಆಗಿದೆ.
ಇದರ ಒಂದು ಷೇರನ್ನು 274 ರೂಪಾಯಿಗೆ ಖರೀದಿ ಮಾಡಲಾಗಿತ್ತು. ಅಂದ್ರೆ ಈ ಷೇರು ಖರೀದಿ ಮಾಡಿದ ಹೂಡಿಕೆದಾರರಿಗೆ ಶೇಕಡಾ 16.42ರಷ್ಟು ಲಾಭ ಸಿಕ್ಕಿದೆ. ಇದ್ರ ಐಪಿಒ ಬಿಡ್ಡಿಂಗ್ ಡಿಸೆಂಬರ್ 15 ಮತ್ತು 17 ರ ನಡುವೆ ನಡೆದಿತ್ತು.
ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿಲ್ಲರೆ ಹೂಡಿಕೆದಾರರಲ್ಲಿ ಇದ್ರ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಕಂಪನಿ ಶೇಕಡಾ 10ರಷ್ಟನ್ನು ಚಿಲ್ಲರೆ ಹೂಡಿಕೆದಾರರಿಗೆ ಮೀಸಲಿಟ್ಟಿತ್ತು. ಎಚ್ ಪಿ ಅಡ್ಹೆಸಿವ್ಸ್ ಐಪಿಎಒನಲ್ಲಿ, 25,28,500 ಷೇರುಗಳನ್ನು ನೀಡಲಾಗಿತ್ತು.
ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಡಿಸೆಂಬರ್ 15 ರಂದು ಶುರುವಾಗಿತ್ತು. ಡಿಸೆಂಬರ್ 17 ರವರೆಗೆ ತೆರೆದಿತ್ತು. ಪ್ರತಿ ಷೇರನ್ನು 262 ರೂಪಾಯಿಯಿಂದ 274 ರೂಪಾಯಿಗೆ ಮಾರಾಟ ಮಾಡಲಾಗಿತ್ತು.
ಐಪಿಒದಿಂದ ಸಂಗ್ರಹವಾದ ಹಣವನ್ನು ಕಂಪನಿ ಅದರ ಕಾರ್ಯನಿರತ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಬಳಸಲಿದೆ. ಉತ್ಪಾದನಾ ಘಟಕದ ವಿಸ್ತರಣೆಗೂ ಒಂದಷ್ಟು ಮೊತ್ತವನ್ನು ವ್ಯಯಿಸಲಿದೆ.