ಪಶ್ಚಿಮ ಬಂಗಾಳದ ಹೌರಾದ ಬಳಿ ಇರುವ ಶಿವ್ಗಂಜ್ನ ದಾಮೋದರ್ ನದಿಯಲ್ಲಿ ಬ್ಲ್ಯಾಕ್ ಕಾರ್ಪ್ ಮೀನೊಂದನ್ನು ಹಿಡಿದ ಮೃತ್ಯುಂಜಯರಿಗೆ ಭಾರೀ ಬಂಪರ್ ಖುಲಾಯಿಸಿದಷ್ಟು ಸಂತಸ ಆವರಿಸಿದೆ.
ಸೋಮವಾರ ಬೆಳಿಗ್ಗೆ ಮೀನು ಹಿಡಿಯಲು ತೆರಳಿದ್ದ ಮೃತ್ಯುಂಜಯರಿಗೆ ಸಿಕ್ಕ 19.6 ಕೆಜಿ ತೂಕದ ಈ ಮೀನು 5,000 ರೂಗಳಿಗೆ ಮಾರಾಟವಾಗಿದೆ. ಸಾಮಾನ್ಯವಾಗಿ 5ರಿಂದ 12 ಕೆಜಿ ತೂಕದ ಈ ಮೀನುಗಳು ಸಿಗುತ್ತವೆ. ಆದರೆ 19.6 ಕೆಜಿಯ ಮೀನು ಸಿಕ್ಕಿರುವುದು ಭಾರೀ ಅಪರೂಪದ ವಿಚಾರವಾಗಿದೆ.
ಇಲ್ಲಿನ ಶ್ಯಾಮಪುರದ ರೂಪನಾರಾಯಣ್ ನದಿಯಲ್ಲಿ 14 ಕೆಜಿ ತೂಕದ ’ಭೋಲಾ ಮೀನು’ ಸಿಕ್ಕಿದ್ದು, ಅದನ್ನು ಕೆಲವು ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿತ್ತು.
ಆದರೆ ಮೃತ್ಯುಂಜಯರ ಈ ಬೇಟೆ ಅವರ ಊರಿನಲ್ಲಿ ದೊಡ್ಡ ಸುದ್ದಿಯಾಗಿದೆ.