ಭಾರತೀಯರು ಮೊಬೈಲ್ ಪ್ರಿಯರು. ಕೆಲವು ದಿನ ಮೊಬೈಲ್ ಬಳಸಿದ ನಂತ್ರ ಅದನ್ನು ಮಾರಾಟ ಮಾಡಿ, ಹೊಸ ಮೊಬೈಲ್ ಖರೀದಿ ಮಾಡ್ತಾರೆ. ಹಬ್ಬದ ಋತುವಿನಲ್ಲಿ ಇದು ಹೆಚ್ಚಾಗಿ ಕಾಣಸಿಗುತ್ತದೆ. ಹಬ್ಬದ ಸಂದರ್ಭದಲ್ಲಿ ಕಂಪನಿಗಳು ಮೊಬೈಲ್ ಮೇಲೆ ಆಫರ್ ನೀಡ್ತವೆ. ಇದ್ರಲ್ಲಿ ಎಕ್ಸ್ಜೇಂಜ್ ಆಫರ್ ಕೂಡ ಇರುತ್ತೆ. ಈ ವೇಳೆ ಹಳೆ ಮೊಬೈಲ್ ನೀಡಿ, ಹೊಸ ಮೊಬೈಲ್ ಖರೀದಿ ಮಾಡುವ ಸಾಕಷ್ಟು ಜನರಿದ್ದಾರೆ.
ಸಾಮಾನ್ಯವಾಗಿ ನಾವು ಹಳೆ ಮೊಬೈಲ್ ಮಾರಾಟ ಮಾಡುವ ಮೊದಲು ಫ್ಯಾಕ್ಟರಿ ರೀಸೆಟ್ ಮಾಡ್ತೆವೆ. ಇದ್ರಿಂದ ಮೊಬೈಲ್ ನಲ್ಲಿರುವ ಎಲ್ಲ ಡೇಟಾ ಹೋಗಿದೆ ಎಂದು ಭಾವಿಸುತ್ತೇವೆ. ಆದ್ರೆ ಮೊಬೈಲ್ ಫ್ಯಾಕ್ಟರಿ ರೀಸೆಟ್ ಮಾಡಿದ್ರೂ ನಿಮ್ಮ ಮೊಬೈಲ್ ನಲ್ಲಿರುವ ಡೇಟಾವನ್ನು ರಿಕವರಿ ಮಾಡಬಹುದು. ಖರೀದಿ ಮಾಡಿದ ವ್ಯಕ್ತಿ, ನಿಮ್ಮ ಮೊಬೈಲ್ ಡೇಟಾವನ್ನು ವಾಪಸ್ ಪಡೆದು ನಿಮಗೆ ಬ್ಲಾಕ್ ಮೇಲ್ ಮಾಡಬಹುದು. ಮೊಬೈಲ್ ಮಾರಾಟ ಮಾಡುವ ಮೊದಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಮೊದಲು ಮೊಬೈಲ್ ಬ್ಯಾಕ್ ಅಪ್ ಪಡೆಯಿರಿ. ನಂತ್ರ ಆಂಡ್ರಾಯ್ಡ್ ಮೊಬೈಲ್ ಫ್ಯಾಕ್ಟರಿ ರೀಸೆಟ್ ಮಾಡಿ. ನಂತ್ರ ಡೇಟಾ ಓವರ್ ರೈಟ್ ಮಾಡಬೇಕಾಗುತ್ತದೆ. ಫ್ಯಾಕ್ಟರಿ ರೀಸೆಟ್ ನಂತ್ರ ಮೊಬೈಲ್ ಕ್ಲೀನ್ ಆಗಿರುತ್ತದೆ. ನಂತ್ರ ನೀವು ಮೊಬೈಲ್ ಗೆ ಜಂಕ್ ಫೈಲ್ ಹಾಕಿ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ವಿಡಿಯೋ, ಫೋಟೋ, ಡೇಟಾ ಹಾಕಬೇಡಿ.
ನಿಮ್ಮ ಫೋನ್ ಮೆಮೊರಿ ಪೂರ್ಣಗೊಳ್ಳುವವರೆಗೂ ಡೇಟಾ ಹಾಕಿ. ನಂತ್ರ ಮತ್ತೊಮ್ಮೆ ಡೇಟಾ ವೈಪ್ ಮಾಡಿ. ಡೇಟಾ ಡಿಲೀಟ್ ಮಾಡಿ ಮತ್ತೆ ಫ್ಯಾಕ್ಟರಿ ರೀಸೆಟ್ ಮಾಡಿ. ಇದ್ರ ನಂತ್ರ ನೀವು ಯಾವುದೇ ಭಯವಿಲ್ಲದೆ ಫೋನ್ ಮಾರಾಟ ಮಾಡಬಹುದು. ಮೆಮೊರಿ ಕಾರ್ಡ್ ಸಮೇತ ಮೊಬೈಲ್ ನೀಡುವವರಿದ್ದರೆ ಮೆಮೊರಿ ಕಾರ್ಡ್ ಗೂ ಇದೇ ನಿಯಮ ಪಾಲನೆ ಮಾಡಿ.