ಮನೆಯಲ್ಲಿ ಮಕ್ಕಳು ಬೆಳೆಯುತ್ತ ಇದ್ದರೆ ಪೋಷಕರ ಬಳಿ ಸಾಕಷ್ಟು ಕಂಪ್ಲೆಂಟ್ ಗಳು ಇರುತ್ತದೆ. ಮೊದಲೆಲ್ಲಾ ಎಷ್ಟು ಚೆನ್ನಾಗಿ ಮಾತು ಕೇಳುತ್ತಿದ್ದ ಮಗ/ಮಗಳು ಈಗ ನಮ್ಮ ಮಾತೇ ಕೇಳುತ್ತಿಲ್ಲ. ಏನು ಹೇಳಿದರೂ ಅದಕ್ಕೆ ವಿರುದ್ಧವಾಗಿ ಮಾಡುತ್ತಿರುತ್ತಾರೆ ಎನ್ನುತ್ತಿರುತ್ತಾರೆ. ಆದರೆ ಸೂಕ್ಷ್ಮವಾಗಿ ಅವರನ್ನು ಗಮನಿಸಿದರೆ ಅವರ ಬದಲಾವಣೆಗೆ ನಮ್ಮ ನಡವಳಿಕೆಗಳು ಕಾರಣವಾಗಿರುತ್ತದೆ.
ಮಕ್ಕಳನ್ನು ಆದಷ್ಟು ನಿಮ್ಮ ಹತೋಟಿಯಲ್ಲಿಯೇ ಇಟ್ಟುಕೊಳ್ಳುವುದಕ್ಕೆ ನೋಡಬೇಡಿ. ಇದರಿಂದ ಅವರಿಗೆ ಅವರ ಭಾವನೆಗಳನ್ನು ಹೊರಹಾಕಲು ಕಷ್ಟವಾಗುತ್ತದೆ.
ಇನ್ನು ಕೆಲವು ಮಕ್ಕಳು ಸಿಕ್ಕಾ ಪಟ್ಟೆ ಪ್ರಶ್ನೆ ಕೇಳುತ್ತಿರುತ್ತಾರೆ. ಆಗ ಅವರಿಗೆ ತಾಳ್ಮೆಯಿಂದ ಉತ್ತರಿಸಿ. ಇದರಿಂದ ಅವರಿಗೂ ಖುಷಿಯಾಗುತ್ತದೆ. ಅವರ ಪ್ರಶ್ನೆ ಕೇಳಿದಾಗ ಜೋರು ಮಾಡಿದರೆ, ಬೈದ್ರೆ ಆಮೇಲೆ ಅವರು ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸುವುದಕ್ಕೆ ಹಿಂದೆ-ಮುಂದೆ ನೋಡುತ್ತಾರೆ.
ಪ್ರೀತಿಯಿಂದ ಆಗದೇ ಇರುವ ಕೆಲಸವೇ ಇಲ್ಲ. ಆದಷ್ಟು ಅವರಿಗೆ ನಿಮ್ಮ ಸಮಯ, ಪ್ರೀತಿ ಕೊಡಿ. ಇದರಿಂದ ಅವರ ಮನಸ್ಸು ಅರಳುತ್ತದೆ. ನಿಮ್ಮ ಮಾತನ್ನು ಕೇಳುತ್ತಾರೆ. ಒಂದೇ ಬಾರಿಗೆ ಎಲ್ಲಾ ಆಗಬೇಕು ಎಂಬ ಹಟಕ್ಕೆ ಬೀಳಬೇಡಿ.