ನೌಕರರ ಭವಿಷ್ಯ ನಿಧಿ,ತನ್ನ ಖಾತೆದಾರರಿಗೆ ಮನೆಯಲ್ಲೇ ಕುಳಿತು ಬ್ಯಾಂಕ್ ವಿವರಗಳನ್ನು ನವೀಕರಿಸಲು ಅವಕಾಶ ನೀಡ್ತಿದೆ. ಬ್ಯಾಂಕ್ ಖಾತೆಯನ್ನು ಪಿಎಫ್ ಖಾತೆಯೊಂದಿಗೆ ಸುಲಭವಾಗಿ ನವೀಕರಿಸಬಹುದು. ಒಂದು ವೇಳೆ ಪಿಎಫ್ ಖಾತೆದಾರರು, ಬ್ಯಾಂಕ್ ಖಾತೆ ಮಾಹಿತಿಯನ್ನು ನವೀಕರಿಸದೆ ಹೋದಲ್ಲಿ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
ಈಗಾಗಲೇ ಪಿಎಫ್ ಖಾತೆಗೆ ಲಿಂಕ್ ಮಾಡಿದ್ದ ಬ್ಯಾಂಕ್ ಖಾತೆಯನ್ನು ಮುಚ್ಚಿದ್ದರೆ ಹೊಸ ಬ್ಯಾಂಕ್ ಖಾತೆಯನ್ನು ಪಿಎಫ್ ಗೆ ಲಿಂಕ್ ಮಾಡಲು ಮರೆಯಬೇಡಿ. ಮೊದಲು ಇಪಿಎಫ್ಒನ ಪೋರ್ಟಲ್ https://unifiedportal-mem.epfindia.gov.in/memberinterface/ ಗೆ ಲಾಗಿನ್ ಮಾಡಬೇಕು. ಲಾಗಿನ್ ಮಾಡಲು ಯುಎಎನ್ ಮತ್ತು ಪಾಸ್ವರ್ಡ್ ನಮೂದಿಸಬೇಕು. ಮುಖ ಪುಟದಲ್ಲಿರುವ ನಿರ್ವಹಿಸು ಆಯ್ಕೆಗೆ ಹೋಗಿ, ನಂತರ ಡ್ರಾಪ್ ಡೌನ್ ಮೆನುವಿನಿಂದ ಕೆವೈಸಿ ಆಯ್ಕೆ ಮಾಡಿ. ಅಲ್ಲಿ ಬ್ಯಾಂಕ್ ಆಯ್ಕೆ ಮಾಡಿ. ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು ಐಎಫ್ಎಸ್ಸಿ ಕೋಡ್ ನಮೂದಿಸುವ ಮೂಲಕ ಉಳಿಸು ಕ್ಲಿಕ್ ಮಾಡಿ. ಇದಕ್ಕೆ ಅನುಮೋದನೆ ಸಿಕ್ಕ ನಂತ್ರ ನವೀಕರಿಸಿದ ಬ್ಯಾಂಕ್ ವಿವರ ನಿಮಗೆ ಕೆವೈಸಿ ವಿಭಾಗದಲ್ಲಿ ಕಾಣಿಸುತ್ತದೆ. ಇದನ್ನು ಕೆಲಸ ಮಾಡುವ ಕಂಪನಿಗೆ ನೀಡಬೇಕಾಗುತ್ತದೆ.