ಇಂದು ದೇಶದ ಜನತೆಗೆ ಎಲ್ಲಾ ಆಧಾರ್ ಕಾರ್ಡ್ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಬೇಕೇಬೇಕು. ಹೀಗಾಗಿ ಸರ್ಕಾರ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಹೇಳಿದ್ದು, ಅದರ ಗಡುವು ಈಗ ಕೇಂದ್ರ ಸರ್ಕಾರ ಈ ಕೊನೆಯ ದಿನಾಂಕವನ್ನು 14 ಸೆಪ್ಟೆಂಬರ್ 2023 ರವರೆಗೆ ವಿಸ್ತರಿಸಿದೆ.
ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಬಹುದು ಮತ್ತು ಅಪ್ಲೋಡ್ ಮಾಡಬಹುದು. ಈ ಮೊದಲು ಕೊನೆಯ ದಿನಾಂಕ ಜೂನ್ 14, 2023 ಆಗಿತ್ತು.
https://myaadhaar.uidai.gov.in/ ಗೆ ಭೇಟಿ ನೀಡಿ ವಿಳಾಸವನ್ನು ನವೀಕರಿಸಲು ಕ್ಲಿಕ್ ಮಾಡಿ.ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿದ ಬಳಿಕ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಅದರ ನಂತರ ಸ್ಕ್ರೀನ್ನಲ್ಲಿ ವಿಳಾಸ ಕಾಣಿಸಿಕೊಳ್ಳುತ್ತದೆ.ಇದರ ನಂತರ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಪರಿಶೀಲಿಸಿ. ಇದು ಸರಿಯಾಗಿದ್ದರೆ, ನೀವು ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿ.ನಂತರ, ನೀವು ವಿಳಾಸ ಹಾಗೂ ನಿಮ್ಮ ಹೆಸರು, ದಾಖಲೆಯನ್ನು ಸಲ್ಲಿಸಬೇಕು. ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ಸಲ್ಲಿಸು(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಯ್ತು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.
ಉಚಿತವಾಗಿ ಅಪ್ ಡೇಟ್ ಮಾಡುವುದು ಹೇಗೆ?
ಹಂತ 1: https://myaadhaar.uidai.gov.in/ ಭೇಟಿ ನೀಡಿ
ಹಂತ 2: ಲಾಗಿನ್ ಮಾಡಿ ಮತ್ತು ‘ಹೆಸರು / ಲಿಂಗ / ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ’ ಆಯ್ಕೆ ಮಾಡಿ
ಹಂತ 3: ‘ಆಧಾರ್ ಆನ್ ಲೈನ್ ಅಪ್ ಡೇಟ್’ ಕ್ಲಿಕ್ ಮಾಡಿ
ಹಂತ 4: ಜನಸಂಖ್ಯಾ ಆಯ್ಕೆಗಳ ಪಟ್ಟಿಯಿಂದ ‘ವಿಳಾಸ’ ಆಯ್ಕೆ ಮಾಡಿ ಮತ್ತು ‘ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ’ ಕ್ಲಿಕ್ ಮಾಡಿ
ಹಂತ 5: ಸ್ಕ್ಯಾನ್ ಮಾಡಿದ ನಕಲನ್ನು ಅಪ್ಲೋಡ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
ಹಂತ 6: ರೂ 25 ಪಾವತಿಸಿ. (ಸೆಪ್ಟೆಂಬರ್ 14 ರವರೆಗೆ ಅಗತ್ಯವಿಲ್ಲ).
ಹಂತ 7: ಸೇವಾ ವಿನಂತಿ ಸಂಖ್ಯೆ ( A Service Request Number) ಅನ್ನು ರಚಿಸಲಾಗುತ್ತದೆ. ನಂತರ ಟ್ರ್ಯಾಕಿಂಗ್ ಸ್ಥಿತಿಗಾಗಿ ಅದನ್ನು ಸೇವ್ ಮಾಡಿಕೊಳ್ಳಿ. ಆಂತರಿಕ ಗುಣಮಟ್ಟ ಪರಿಶೀಲನೆ ಪೂರ್ಣಗೊಂಡ ನಂತರ, ನಿಮಗೆ ಒಂದು ಎಸ್ಎಂಎಸ್ ಬರುತ್ತದೆ.