ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಎಲ್ಲವೂ ಆನ್ಲೈನ್ ಆಗಿರುವುದರಿಂದಾಗಿ ಅಚೇರಿ ಕೆಲಸದಿಂದ ಹಿಡಿದು ಮನೆಗೆ ದಿನಸಿ ತರಿಸುವವರೆಗೂ ಕಂಪ್ಯೂಟರ್ ಮುಂದೆ ಕೂರಬೇಕಾಗಿ ಬಂದಿದೆ.
ಕಚೇರಿ ಕೆಲಸದ ಮೇಲೆ ನಡೆಯುವ ಮೀಟಿಂಗ್‌ಗಳ ಸಂದರ್ಭದಲ್ಲಿ ಪಿಸಿ ಕ್ಯಾಮೆರಾಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಒಂದು ವೇಳೆ ನಿಮ್ಮ ಪಿಸಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ ಇಲ್ಲೊಂದಿಷ್ಟು ಟ್ರಬಲ್‌ಶೂಟಿಂಗ್ ಸಲಹೆಗಳು ನಿಮಗಾಗಿ ಕೊಟ್ಟಿದ್ದೇವೆ.
ವಿಂಡೋಸ್ 10ನಲ್ಲಿ ವೆಬ್‌ಕ್ಯಾಮ್ ಆನ್ ಮಾಡುವುದು ಹೇಗೆ ?
ಇದಕ್ಕಾಗಿ ನೀವು ನಿಮ್ಮ ಕೀಬೋರ್ಡ್‌ನಲ್ಲಿ Win+S ಟೈಪ್ ಮಾಡಿ, ಸರ್ಚ್ ಬಾರ್‌ನಲ್ಲಿ ‘Camera’ ಟೈಪ್ ಮಾಡಿ. ಈಗ ವಿಂಡೋಸ್ ಕ್ಯಾಮೆರಾ ಅಪ್ಲಿಕೇಶನ್ ತೆರೆಯುವ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಒಂದು ವೇಳೆ ಮೂರನೇ ಪಾರ್ಟಿಯ ಅಪ್ಲಿಕೇಶನ್‌ಗಳಿಗೆ ನಿಮ್ಮ ಕ್ಯಾಮೆರಾದ ಅಕ್ಸೆಸ್ ಬೇಕಿದ್ದು, ಅಗತ್ಯವಿರುವ ಅನುಮತಿಗಳನ್ನು ನೀಡಬೇಕಾಗುತ್ತದೆ.
ಮೊದಲ ಬಾರಿ NDA ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ ಮಹಿಳೆಯರು….!
ವಿಂಡೋಸ್ ಓಸ್ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತದೆ. ಒಮ್ಮೊಮ್ಮೆ ಈ ಅಪ್ಡೇಟ್ ಪ್ಯಾಚ್‌ಗಳಲ್ಲಿ ನಿಮ್ಮ ಕ್ಯಾಮೆರಾ ಅಪ್ಲಿಕೇಶನ್ ಸಹ ಮೇಲ್ದರ್ಜೆಗೇರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ಈ ಅಪ್ಡೇಟ್‌ಗಳನ್ನು ಮಾಡದೇ ಇದ್ದಲ್ಲಿ ನಿಮ್ಮ ಕ್ಯಾಮೆರಾ ಅಪ್ಲಿಕೇಶನ್ ಕ್ರಾಶ್ ಆಗುವ ಸಾಧ್ಯತೆ ಇರುತ್ತದೆ.
ಒಮ್ಮೆ ವಿಂಡೋಸ್ ಅಪ್ಡೇಟ್ ಆಗುತ್ತಲೇ ಸಿಸ್ಟಮ್ ಅನ್ನು ರೀಸ್ಟಾರ್ಟ್ ಮಾಡಿ. ಒಂದು ವೇಳೆ ಹೀಗೆ ವಿಂಡೋಸ್ ಅಪ್ಡೇಟ್ ಮಾಡಿ ರೀಸ್ಟಾರ್ಟ್ ಮಾಡಿದ ಮೇಲೂ ನಿಮ್ಮ ಕ್ಯಾಮೆರಾ ಕೆಲಸ ಮಾಡದೇ ಇದ್ದಲ್ಲಿ ಹಾರ್ಡ್‌ವೇರ್ ಸಮಸ್ಯೆ ಇರುವ ಸಾಧ್ಯತೆ ಇರುತ್ತದೆ.
ನಿಮ್ಮ ಕ್ಯಾಮೆರಾವನ್ನು ಯಾವಾಗಲೂ ಎನೇಬಲ್ ಆಗಿದೆ ಎಂದು ಖಾತ್ರಿ ಮಾಡಿಕೊಳ್ಳಿ. ಬಾಹ್ಯ ವೆಬ್‌ಕ್ಯಾಮ್‌ಗಳ ಕೇಸ್‌ನಲ್ಲಿ ಕೇಬಲ್‌ಗಳು ಕಂಪ್ಯೂಟರ್‌ಗೆ ಸರಿಯಾಗಿ ಕನೆಕ್ಟ್ ಆಗಿವೆ ಎಂದು ಖಾತ್ರಿ ಮಾಡಿಕೊಳ್ಳಿ. ವೆಬ್‌ಕ್ಯಾಮ್ ಬಳಕೆಯನ್ನು ಬಹಳ ಸರಳವಾಗಿ ಮಾಡಿದೆ ಮೈಕ್ರೋಸಾಫ್ಟ್. ಲೇಟೆಸ್ಟ್ ಅಪ್ಡೇಟ್‌ಗಳು ಹಾಗೂ ಅಗತ್ಯವಾದ ಡ್ರೈವ್‌ಗಳನ್ನು ವೆಬ್‌ಕ್ಯಾಮ್ ಬಳಸಲು ಉಪಯೋಗಿಸಿ.