ಭವಿಷ್ಯ ನಿಧಿ ಸಂಘಟನೆಯ ಸದಸ್ಯರು, ಉದ್ಯೋಗ ಬದಲಿಸಿದ್ದರೆ ಚಿಂತಿಸುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಸುಲಭವಾಗಿ ಪಿಎಫ್ ಖಾತೆಯನ್ನು ವರ್ಗಾಯಿಸಬಹುದು. ಹಳೆಯ ಇಪಿಎಫ್ ಖಾತೆಯ ಹಣವನ್ನು ಹೊಸ ಕಂಪನಿಯ ಇಪಿಎಫ್ ಖಾತೆಗೆ ವರ್ಗಾಯಿಸುವ ಮೂಲಕ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.
ಪಿಎಫ್ ಖಾತೆ ವರ್ಗಾವಣೆ ಮಾಡಲು ಮೊದಲು ಯುಎಎನ್ ಸಂಖ್ಯೆ ಹಾಗೂ ಪಾಸ್ವರ್ಡ್ ಹಾಕುವ ಮೂಲಕ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ಇಪಿಎಫ್ಒ ವೆಬ್ಸೈಟ್ನಲ್ಲಿ ಆನ್ಲೈನ್ ಸೇವೆಗಳಿಗೆ ಹೋಗಬೇಕು. ಅಲ್ಲಿ ಇಪಿಎಫ್ ಖಾತೆಯನ್ನು ಆಯ್ಕೆ ಮಾಡಬೇಕು. ಅಲ್ಲಿ ಮತ್ತೊಮ್ಮೆ ಯುಎಎನ್ ಸಂಖ್ಯೆ ನಮೂದಿಸಬೇಕು. ಇಲ್ಲವೆ ಹಳೆಯ ಇಪಿಎಫ್ ಸದಸ್ಯ ಐಡಿ ನಮೂದಿಸಬೇಕು. ಆಗ ಖಾತೆ ಬಗ್ಗೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಹಳೆ ಕಂಪನಿ ಹಾಗೂ ಹೊಸ ಕಂಪನಿ ಹೆಸರನ್ನು ನಮೂದಿಸಬೇಕು. ನಂತ್ರ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು. ಒಟಿಪಿ ಬಂದ ನಂತ್ರ ಅದನ್ನು ನಮೂದಿಸಿ ಹಣ ವರ್ಗಾವಣೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಅಕ್ರಮ –ಸಕ್ರಮ ಯೋಜನೆಯಡಿ 15 ಲಕ್ಷ ಜನರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಮಹತ್ವದ ಕ್ರಮ
ಆನ್ಲೈನ್ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಆಯ್ದ ಕಂಪನಿ ಅಥವಾ ಸಂಸ್ಥೆಗೆ, ಪಿಡಿಎಫ್ ಫೈಲ್ನಲ್ಲಿ ಆನ್ಲೈನ್ ಪಿಎಫ್ ವರ್ಗಾವಣೆ ಅರ್ಜಿಯ ಸ್ವಯಂ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು. ಇದರ ನಂತರ ಕಂಪನಿ ಅದನ್ನು ಅನುಮೋದಿಸುತ್ತದೆ. ಅನುಮೋದನೆ ಪಡೆದ ನಂತರ, ಪಿಎಫ್ ಹೊಸ ಖಾತೆಗೆ ವರ್ಗಾವಣೆಗೊಳ್ಳುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ಇಪಿಎಫ್ ಚಂದಾದಾರರಿಗೆ ಇಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ವಿಷಯದಲ್ಲಿ ಸ್ವಲ್ಪ ನೆಮ್ಮದಿ ನೀಡಿದೆ. ಲಿಂಕ್ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.