ಮಕ್ಕಳ ಬುದ್ಧಿಶಕ್ತಿ ನಿಜವಾಗಿಯೂ ಚುರುಕುಗೊಳ್ಳುತ್ತಿದೆಯೋ ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ. ಅದಕ್ಕಾಗಿ ಮಕ್ಕಳ ಆಹಾರ ಹೀಗಿರಲಿ
ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ತಿನ್ನಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್ ಹಾಗೂ ಪ್ರೊಟೀನ್ ಅಂಶವಿದ್ದು ಇದು ಮಗುವಿನ ದೇಹ ಬೆಳವಣಿಗೆಗೆ ಸಹಾಐವಾಗುತ್ತದೆ. ಮಗು ದಿನವಿಡಿ ಚೈತನ್ಯದಿಂದ ಇರುವಂತೆಯೂ ನೋಡಿಕೊಳ್ಳುತ್ತದೆ. ಮಗುವಿನ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಕ್ಕಳ ಮೆದುಳನ್ನು ಚುರುಕುಗೊಳಿಸುವಲ್ಲಿ ಓಟ್ಸ್ ನ ಪಾತ್ರವೂ ದೊಡ್ಡದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ ಅಲ್ಲದೆ ವಿಟಮಿನ್ ಬಿ, ಇ ಗಳಿವೆ.
ತರಕಾರಿಗಳ ಪೈಕಿ ಟೊಮೆಟೊ, ಸಿಹಿಗೆಣಸು, ಕುಂಬಳಕಾಯಿ, ಪಾಲಕ್ ಗಳನ್ನು ಬಳಸಿ ಅಡುಗೆ ಮಾಡಿ ಮಕ್ಕಳಿಗೆ ಸವಿಯಲು ಕೊಡಿ.
ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ ಮಕ್ಕಳ ಊಟದಲ್ಲಿ ಸೇರಿಸಿ. ಮತ್ತು ಹಣ್ಣುಗಳನ್ನು ತಿನ್ನಿಸಿ.