ದುಡ್ಡು ಖರ್ಚು ಮಾಡುವುದಕ್ಕೆ ಇಂದು ಬೇಕಾದಷ್ಟು ಅವಕಾಶವಿದೆ. ಆದರೆ ದುಡ್ಡು ಉಳಿಸುವ ಮಾತು ಬಂದರೆ ಎಲ್ಲರ ಮನಸ್ಸು ಒಂದು ಕ್ಷಣ ಯೋಚಿಸುತ್ತದೆ.
ತಿಂಗಳಿಗೆ ಇಂತಿಷ್ಟು ಎಂದು ಹಣ ತೆಗೆದಿಡುವ ಪ್ಲ್ಯಾನ್ ಹಾಕಿಕೊಂಡರೆ ಕೆಲವೊಮ್ಮೆ ಹಣಕಾಸಿನ ಅಡಚಣೆಯಾಗಿ ಆ ಪ್ಲ್ಯಾನ್ ಕೂಡ ಅಲ್ಲಿಯೇ ನಿಲ್ಲುವ ಸಂದರ್ಭ ಇರುತ್ತದೆ.
ಅದು ಅಲ್ಲದೇ ಈಗ ಮೊಬೈಲ್ ನಲ್ಲಿಯೇ ಹಣ ಟ್ರಾನ್ಸ್ ಫರ್ ಮಾಡಬಹುದಾದ್ದರಿಂದ ಏನೇ ನೋಡಿದರೂ ಅದು ಕೊಂಡುಕೊಳ್ಳುವ ಆಸೆ ಆಗಿ ಥಟ್ಟಂತ ಪೇಮೆಂಟ್ ಕೂಡ ಮಾಡಿಬಿಡುತ್ತವೇ. ಹಾಗಾಗಿ ಉಳಿಸುವುದಕ್ಕಿಂತ ಹೆಚ್ಚಾಗಿ ಖರ್ಚು ಮಾಡುವ ದಾರಿಗಳೇ ಹೆಚ್ಚಿರುತ್ತದೆ.
ಮನಸ್ಸಿನ ಮೇಲೆ ಹಿಡಿತ ಕೂಡ ಇಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೈಯಲ್ಲಿ ದುಡ್ಡು ಇದೆ ಎಂದಾಕ್ಷಣ ಮನಸ್ಸು ಕೂಡ ತನ್ನ ದಾರಿ ತಪ್ಪುತ್ತದೆ. ಹಾಗಾಗಿ ಬೇರೊಂದು ಅಕೌಂಟ್ ಮಾಡಿಟ್ಟುಕೊಳ್ಳಿ. ಮನೆ ಖರ್ಚುಗಳನ್ನೆಲ್ಲ ಕಳೆದು ಉಳಿದ ದುಡ್ಡು ಇದ್ದರೆ ಅದಕ್ಕೆ ಹಾಕಿಬಿಡಿ.
ಮಕ್ಕಳ ಹೆಸರಿನಲ್ಲೊಂದು ಅಕೌಂಟ್ ಅಥವಾ ಎಲ್. ಐ. ಸಿ. ಮಾಡಿಸಿ. ಇದರಿಂದ ಅವರ ಮುಂದಿನ ಭವಿಷ್ಯಕ್ಕೆ ಅದು ಸಹಾಯವಾಗುತ್ತದೆ.
ನೋಡಿದ್ದನ್ನೆಲ್ಲಾ ಕೊಂಡುಕೊಳ್ಳುವ ಬಯಕೆಯನ್ನು ಆದಷ್ಟು ನಿಯಂತ್ರಿಸಿ. ಅದು ಅಗತ್ಯವಿದೆಯಾ ಎಂಬುದನ್ನು ಯೋಚಿಸಿ ತೆಗೆದುಕೊಳ್ಳಿ.