ತೂಕ ಇಳಿಸಲು ವಾಕಿಂಗ್ ಜೊತೆಗೆ ರನ್ನಿಂಗ್ ಮಾಡುವುದು ಒಳ್ಳೆಯದೇ. ಆದರೆ ಕೆಲವೊಮ್ಮೆ ಈ ವಿಷಯಗಳ ಕುರಿತು ಎಚ್ಚರ ವಹಿಸುವುದರಿಂದ ಬಹುಬೇಗ ತೂಕವನ್ನು ಕಡಿಮೆ ಮಾಡಬಹುದು.
ಬಹಳ ವೇಗವಾಗಿ ಓಡುವುದರಿಂದ ಸುಸ್ತಾಗುತ್ತದೆಯೇ ಹೊರತು ದೇಹಕ್ಕೆ ಸಾಕಷ್ಟು ವ್ಯಾಯಾಮ ದೊರೆಯುವುದಿಲ್ಲ. ಹಾಗಾಗಿ ನಿಯಮಿತ ವೇಗದಲ್ಲಿ ಎರಡರಿಂದ ಮೂರು ಕಿಮೀ ದೂರ ನಿತ್ಯ ಓಡಿ.
ಉಸಿರು ಬಿಗಿ ಹಿಡಿದು ಓಡುವುದರಿಂದಲೂ ಬಲು ಬೇಗ ಸುಸ್ತಾಗುತ್ತದೆ ಮತ್ತು ಸಾಕಷ್ಟು ಆಮ್ಲಜನಕ ದೇಹಕ್ಕೆ ಪೂರೈಕೆಯಾಗದೆ ಕೈಕಾಲುಗಳು ಬಿಗಿದು ಹಿಡಿದಂತಾಗುತ್ತದೆ. ಅದರ ಬದಲು ಓಡುವಾಗ ಬಾಯಿ ಮತ್ತು ಮೂಗಿನ ಸಹಾಯದಿಂದ ನಿರಂತರವಾಗಿ ಉಸಿರಾಡಿ.
ಓಡುವಾಗ ಆರಾಮ ಎನಿಸುವ ಉಡುಪನ್ನೇ ಧರಿಸಿ. ದಪ್ಪ ಉಡುಪಿನಿಂದ ದೇಹ ಬೆವರಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ದೇಹದ ಭಂಗಿಯನ್ನು ಸರಿಯಾಗಿ ಇಟ್ಟುಕೊಂಡು ಓಡಿ. ಕೈಗಳನ್ನು ಫ್ರೀಯಾಗಿ ಬಿಟ್ಟುಬಿಡಿ. ಓಡಿದ ಬಳಿಕ ಸಾಕಷ್ಟು ನೀರು ಕುಡಿಯಿರಿ. ಹೀಗೆ ಮಾಡಿದರೆ ತಿಂಗಳೊಳಗೆ ನಿಮ್ಮ ತೂಕ ನಿಯಂತ್ರಣಕ್ಕೆ ಬರುವುದು ನಿಶ್ಚಿತ.