ಚಳಿಗಾಲ ಬಂದ್ರೆ ಅನೇಕರು ಭಯಪಡ್ತಾರೆ. ಈ ಋತುವಿನಲ್ಲಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಕೈ ಕಾಲು ಸೇರಿದಂತೆ ದೇಹದ ಅನೇಕ ಭಾಗಗಳು ಒಡೆದು, ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವರ ಹಿಮ್ಮಡಿಯಿಂದ ರಕ್ತ ಬರುತ್ತದೆ. ಚಳಿಗಾಲದ ಆರೋಗ್ಯಕ್ಕೆ ಮನೆಯಲ್ಲಿ ಈ ವಸ್ತುಗಳಿದ್ದರೆ ಬೆಸ್ಟ್.
ಜೇನುತುಪ್ಪ ಪ್ರತಿ ಮನೆಯಲ್ಲೂ ಇರುತ್ತೆ. ಊಟದ ನಂತರ ಸೋಂಪಿನ ಜೊತೆ ಇದನ್ನು ಸೇವಿಸಬೇಕು. ಇದನ್ನು ಸೇವಿಸುವುದರಿಂದ ಕಫ ಮತ್ತು ಕೆಮ್ಮು, ಗಂಟಲು ನೋವು ಬಹು ಬೇಗ ಗುಣವಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ.
ಚಳಿಗಾಲದಲ್ಲಿ ಅಜೀರ್ಣಕ್ಕೊಳಗುವುದು ಹೆಚ್ಚು. ಸೋಂಪು ಜೀರ್ಣಕ್ರಿಯೆಗೆ ಉತ್ತಮ ಔಷಧ. ತುಂಬಾ ಚಳಿಯಿಂದ ಅಜೀರ್ಣ ಆದರೆ ಸೋಂಪನ್ನು ತಿನ್ನಿ. ಇದು ಹೊಟ್ಟೆ ಸಮಸ್ಯೆಗಳಿಂದ ದೂರ ಇರಿಸುತ್ತದೆ.
ಬೇಸಿಗೆಗೆ ಹೋಲಿಸಿದರೆ ಕಾಲು ನೋವಿನ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚು. ಇದನ್ನು ಕಡಿಮೆ ಮಾಡಲು ಕರ್ಪೂರದ ತುಂಡನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಕರಗಿಸಿ, ಸ್ವಲ್ಪ ಬಿಸಿ ಆದ ನಂತರ ಕಾಲುಗಳಿಗೆ ಮಸಾಜ್ ಮಾಡಿ. ಕೀಲು ನೋವು ಮತ್ತು ಊತ ಕಡಿಮಮೆಯಾಗುತ್ತದೆ.
ಚಳಿಗಾಲದ ಒಣ ಹವೆಯ ಕಾರಣದಿಂದಾಗಿ ತ್ವಚೆ ಒಣಗುವುದು ಮತ್ತು ತುರಿಕೆ ಹೆಚ್ಚಾಗುತ್ತದೆ. ಇದರಿಂದ ಪರಿಹಾರ ಪಡೆಯಲು ಅಲೋವೆರಾ ಜೆಲ್ ಬಳಸಿ.
ಕಟ್ಟಿದ ಮೂಗಿನ ಸಮಸ್ಯೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ನೀರನ್ನು ಕುದಿಸಿ ಅದಕ್ಕೆ ನೀಲಗಿರಿ ಎಣ್ಣೆಯ 2 ಹನಿಗಳನ್ನು ಹಾಕಿ. ಅದರ ಆವಿಯನ್ನು ತೆಗೆದುಕೊಳ್ಳಿ. ಆದರೆ ಇದನ್ನು ಬಳಸುವಾಗ ನೀಲಗಿರಿ ತೈಲವನ್ನು ಹೆಚ್ಚು ಬಳಸಬಾರದು ಎಂಬುದು ನೆನಪಿನಲ್ಲಿರಲಿ.