ಆನ್‌ಲೈನ್ ನೋಂದಣಿ:
ಹಂತ 1: ನೋಂದಣಿಗಾಗಿ, ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್ (www.passportindia.gov.in)ಗೆ ಲಾಗಿನ್ ಆಗಿ.
ಹಂತ 2: ಈಗಾಗಲೇ ಬಳಕೆದಾರರಾಗಿದ್ದರೆ ‘ಎಕ್ಸಿಸ್ಟಿಂಗ್ ಯೂಸರ್’ ಆಯ್ಕೆ ಮಾಡಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು.
ಹಂತ 3: ಹೊಸ ಬಳಕೆದಾರರಾದರೆ “‘New User? Register Now” ಕ್ಲಿಕ್ ಮಾಡಿಕೊಂಡು, ಅಲ್ಲಿ ನೋಂದಾಯಿಸಿ.
ಹಂತ 4: ನಿಮ್ಮ ಸಮೀಪದ ಮತ್ತು ಸುಲಭವಾಗಿ ತಲುಪಬಹುದಾದ ಪಾಸ್‌ಪೋರ್ಟ್ ಕಚೇರಿಯನ್ನು ಹುಡುಕಿ.
ಹಂತ 5: ನೋಂದಣಿ ಪ್ರಕ್ರಿಯೆಯು ಸಲೀಸಾಗಿ ಮುಂದುವರಿಯಲು ಮೂಲಭೂತ ವಿವರಗಳನ್ನು ಸರಿಯಾಗಿ ದಾಖಲಿಸಬೇಕು.
ಹಂತ 6: ಇಷ್ಟಾದ ಬಳಿಕ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸಿ.
ಹಂತ 7: ನಂತರ ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ದೃಢೀಕರಣ ಇಮೇಲ್ ತಲುಪುತ್ತದೆ.
ಹಂತ 8: ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ ಖಾತೆಯನ್ನು ಸಕ್ರಿಯಗೊಳಿಸಿ.
ಹಂತ 9: ಪಾಸ್‌ಪೋರ್ಟ್ ಖಾತೆಗೆ ಲಾಗ್ ಇನ್ ಮಾಡಿದ ನಂತರ, “Apply for Fresh Passport/ Reissue of Passport’” ಆಯ್ಕೆಮಾಡಿ.
ಭರ್ತಿ ಮಾಡುವ ನಮೂನೆ:
ಹಂತ 1: ಫಾರ್ಮ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿ.
ಹಂತ 2: ಮುಂದೆ ಆನ್‌ಲೈನ್‌ನಲ್ಲಿ ಲಭ್ಯ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಪಾಸ್‌ಪೋರ್ಟ್‌ನ ಪ್ರಸ್ತುತ ಸ್ಥಿತಿಯನ್ನು ನಮೂದಿಸಿ.
ಹಂತ 3: ಬಳಕೆದಾರರು ತಮ್ಮ ಸಂಗಾತಿಯ ವಿವರಗಳನ್ನೂ ನವೀಕರಿಸಬಹುದು.
ಹಂತ 4: ಹೆಸರು, ಸಂಪರ್ಕ ಸಂಖ್ಯೆ ಮತ್ತು ವಿಳಾಸದಂತಹ ಪೂರ್ಣ ವಿವರಗಳೊಂದಿಗೆ ಇಬ್ಬರು ಸ್ಥಳೀಯರನ್ನು ರೆಫರೆನ್ಸ್ ಆಗಿ ನೀಡಬೇಕು. ಪೊಲೀಸ್ ಪರಿಶೀಲನೆ ವೇಳೆ ವಿಳಾಸ ದೃಢೀಕರಿಸುವುದಕ್ಕೆ ಈ ಸ್ಥಳೀಯರನ್ನು ಸಂಪರ್ಕಿಸಬಹುದು.
ಹಂತ 5: ಫಾರ್ಮ್ ಅನ್ನು ಭರ್ತಿ ಮಾಡುವಾಗ, ನಗರ ಮತ್ತು ಗ್ರಾಮವನ್ನು ಒಂದೇ ಕ್ಲಿಕ್ ಮೂಲಕ ಮೌಲ್ಯೀಕರಿಸಬೇಕು. ಆ ಅರ್ಜಿಯನ್ನು ಸೇವ್ ಮಾಡಬೇಕು.
ಹಂತ 6: ಮುಂದೆ, ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಿದ ಅದೇ ಪುಟದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ 7: ಅಂತಿಮವಾಗಿ, ಆನ್‌ಲೈನ್ ಫಾರ್ಮ್‌ನಲ್ಲಿ ತನ್ನಿಂತಾನೇ ವಿವರಗಳು ನಮೂದಾಗುತ್ತವೆ.
ಸ್ಲಾಟ್ ಬುಕಿಂಗ್:
ಹಂತ 1: ‘Schedule Appointment’ ಎಂಬುದನ್ನು ಆಯ್ಕೆ ಮಾಡಬೇಕು.
ಹಂತ 2: ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಲಭ್ಯ ಸ್ಲಾಟ್ ಅನ್ನು ಆಯ್ಕೆ ಮಾಡಬೇಕು.
ಹಂತ 3: ಸ್ಲಾಟ್ ದೃಢೀಕರಿಸಿದ ನಂತರ, ಅಪಾಯಿಂಟ್‌ಮೆಂಟ್ ಸಿಕ್ಕುತ್ತದೆ.