ದೇಹದಲ್ಲಿ ಕಲ್ಮಶಗಳು ಸೇರಿಕೊಳ್ಳುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಇದನ್ನು ಹೊರ ಹಾಕುವುದು ಹೇಗೆಂದು ನಿಮಗೆ ಗೊತ್ತೇ? ಅದಕ್ಕೆ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ.
ಹಸಿ ಕ್ಯಾರೆಟ್ ಅಥವಾ ಬೀಟ್ ರೂಟ್ ಅನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿರುವ ಅನಗತ್ಯ ಅಂಶಗಳು ಹೋಗುವುದು ಮಾತ್ರವಲ್ಲ ಆರೋಗ್ಯ ವೃದ್ಧಿಯಾಗುತ್ತದೆ. ತ್ವಚೆಯ ಕಾಂತಿ ಹೆಚ್ಚುತ್ತದೆ. ಈ ಜ್ಯೂಸ್ ಗೆ ಸಕ್ಕರೆ ಬಳಸುವ ಬದಲು ಜೇನು ಸೇರಿಸಿ. ಇದು ಕೂಡ ಅನಗತ್ಯ ಅಂಶಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತವೆ.
ಆಪಲ್ ಜ್ಯೂಸ್ ಕುಡಿಯುವುದರಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು. ಸೌತೆಕಾಯಿ, ಪುದೀನಾ, ಲಿಂಬೆರಸದೊಂದಿಗೆ ನೀರು ಹಾಕಿ ಕುಡಿದರೆ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ. ನೆನಪಿಡಿ, ದೇಹದಲ್ಲಿ ನೀರಿನಂಶ ಹೆಚ್ಚಿದಾಗ ಮಾತ್ರ ದೇಹದ ಕಲ್ಮಶಗಳನ್ನು ಹೊರ ಹಾಕುವುದು ಸುಲಭವಾಗುತ್ತದೆ.
ಹುರಿಗಡಲೆ ಹಿಟ್ಟಿಗೆ ಜೀರಿಗೆ ಪುಡಿ, ಹಸಿಮೆಣಸು, ಬೆಲ್ಲ, ಶುಂಠಿ ಸೇರಿಸಿ ಜ್ಯೂಸ್ ರೂಪಕ್ಕೆ ತಂದು ಕುಡಿಯಿರಿ. ಇದು ಕೂಡಾ ದೇಹದಲ್ಲಿ ನೀರಿನಂಶವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.