alex Certify ಮಕ್ಕಳನ್ನು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸುವುದು ಹೇಗೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸುವುದು ಹೇಗೆ….?

ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಹೇಗೆ ಅವರನ್ನು ಸದೃಢವಾಗಿರಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.

ಮಕ್ಕಳು ಮನೆಯಲ್ಲಿರುವ ತಂದೆ-ತಾಯಿ, ಇತರ ಮಂದಿಯನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರ ಮಾನಸಿಕ ಬೆಳವಣಿಗೆಗೆ ಒಂದು ಒಳ್ಳೆಯ ವಾತಾವರಣ ಇರಬೇಕು.

ನಮ್ಮ ಸಿಟ್ಟು, ಕೋಪವನ್ನು ನಿಯಂತ್ರಿಸಿಕೊಳ್ಳುವುದು ಕೂಡ ಮಹತ್ವವಾಗಿರುತ್ತದೆ. ಮಕ್ಕಳ ಮುಂದೆ, ಜಗಳವಾಡುವುದು, ಇನ್ನೊಬ್ಬರ ಕುರಿತು ಚಾಡಿ ಮಾತನಾಡುವುದು, ಸುಳ್ಳನ್ನಾಡುವುದರಿಂದ ಅವರು ಕೂಡ ದೊಡ್ಡವರ ಹಾದಿ ಹಿಡಿಯುತ್ತಾರೆ. ಹಾಗಾಗಿ ಅವರಿಗೆ ಇದೆಲ್ಲ ತಪ್ಪು ಎಂಬುದನ್ನು ಮೊದಲೇ ತಿಳಿ ಹೇಳಬೇಕು.

ಇನ್ನೊಬ್ಬರನ್ನು ಕ್ಷಮಿಸುವ, ಕಷ್ಟದಲ್ಲಿಯೂ ಭರವಸೆಯನ್ನು ಇಟ್ಟುಕೊಳ್ಳುವ ಶಿಕ್ಷಣ ಮನೆಯಿಂದಲೇ ಶುರುವಾಗಬೇಕು. ಹಾಗೇ ಅವರನ್ನು ಎಲ್ಲರ ಜತೆ ಬೆರೆಯುವುದಕ್ಕೆ ಬಿಡಬೇಕು. ಆಗ ಅವರಿಗೆ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದು ತಿಳಿಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...