ಭಾರತ ಸೇರಿದಂತೆ ವಿಶ್ವದಲ್ಲಿ ಕೊರೊನಾ ವೈರಸ್ ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಕೂಡ ವೇಗವಾಗಿ ಹರಡುತ್ತಿದೆ. ಕೊರೊನಾ ಮಧ್ಯೆಯೇ ಹೊಸ ವರ್ಷಾಚರಣೆಗೆ ಜನರು ಸಿದ್ಧರಾಗಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ವೇಳೆ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಒಮಿಕ್ರಾನ್ ರೂಪಾಂತರ ತಪ್ಪಿಸಲು ತಪ್ಪದೆ ಕೆಲವು ಕೆಲಸ ಮಾಡ್ಬೇಕಿದೆ. ಕೊರೊನಾ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಅನೇಕರು ಮಾಸ್ಕ್ ಮರೆತಿದ್ದರು. ಆದ್ರೆ ಮಾಸ್ಕ್ ಅನಿವಾರ್ಯವಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವ ಮೊದಲು ಮಾಸ್ಕ್ ಧರಿಸುವುದು ಬಹಳ ಮುಖ್ಯ.
ಮಾಸ್ಕ್ ಜೊತೆಗೆ ಸಾಮಾಜಿಕ ಅಂತರ ಕೂಡ ಬಹಳ ಮುಖ್ಯವಾಗಿದೆ. ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವ ಮೊದಲು ಎಚ್ಚರಿಕೆ ವಹಿಸಿ. ಸಾಧ್ಯವಾದ್ರೆ ಜನಸಂದಣಿ ಇರುವ ಪ್ರದೇಶಕ್ಕೆ ಹೋಗಬೇಡಿ.
ಹೊರಗಿನಿಂದ ಬಂದ ತಕ್ಷಣ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಸ್ಯಾನಿಟೈಜರ್ ಬಳಕೆಯನ್ನು ಮರೆಯಬೇಡಿ. ಕೈ ಸ್ವಚ್ಛಗೊಳಿಸದೆ ಯಾವುದೇ ಕಾರಣಕ್ಕೆ ಬಾಯಿ, ಮೂಗುಗಳನ್ನು ಮುಟ್ಟಬೇಡಿ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಆದರೆ ಕೆಲಸ ಅನಿವಾರ್ಯ. ನೀವೂ ಕೆಲಸಕ್ಕೆ ಹೋಗ್ತಿದ್ದರೆ ಆದಷ್ಟು ಮನೆಯಲ್ಲಿಯೇ ಕೆಲಸ ಮಾಡಲು ಪ್ರಯತ್ನಿಸಿ. ಮನೆಯಲ್ಲಿಯೇ ಹೊಸ ವರ್ಷಾಚರಣೆ ಮಾಡುವುದು ಒಳ್ಳೆಯದು.
ಕೋವಿಡ್-19 ರೋಗಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಹಾಗೆ ಮನೆಯವರಿಂದ ದೂರವಿರಿ. ಕೊರೊನಾ ಎರಡು ಡೋಸ್ ತೆಗೆದುಕೊಂಡವರಿಗೂ ಕೊರೊನಾ ಬರ್ತಿದೆ. ಹಾಗಾಗಿ ಎಚ್ಚರಿಕೆ ವಹಿಸಿ.