alex Certify ‘ನಾನ್‌ಸ್ಟಿಕ್‌’ ಪಾತ್ರೆ ಸ್ಕ್ರಾಚ್ ಆಗದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾನ್‌ಸ್ಟಿಕ್‌’ ಪಾತ್ರೆ ಸ್ಕ್ರಾಚ್ ಆಗದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ನಾನ್‌ಸ್ಟಿಕ್ ಅಡುಗೆ ಪಾತ್ರೆಗಳನ್ನು ಕೊಳ್ಳುವಾಗ ಉತ್ತಮ ಗುಣಮಟ್ಟದ ಪಾತ್ರೆ ನೋಡಿ ಕೊಂಡರೂ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಅದರ ಮೇಲ್ಪದರ ಕಿತ್ತು ಹೋಗಿರುತ್ತದೆ.

ನಾನ್‌ಸ್ಟಿಕ್‌ ಪಾತ್ರೆಯ ನಿರ್ವಹಣೆ ಈಸಿ ಅನಿಸಿದರೂ ಅಷ್ಟು ಸುಲಭವಲ್ಲ. ಅದನ್ನು ತೊಳೆಯುವಾಗ ಹಾಗೂ ಅದರಲ್ಲಿ ಆಹಾರವನ್ನು ಬೇಯಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅದರ ಮೇಲೆ ಗೆರೆಗಳು ಬಿದ್ದು, ತನ್ನ ಆಕರ್ಷಕ ಲುಕ್ ಕಳೆದುಕೊಳ್ಳುತ್ತದೆ. ಆದರೆ ಈ ಟಿಪ್ಸ್ ಪಾಲಿಸಿದರೆ ನಾನ್‌ಸ್ಟಿಕ್‌ ಪಾತ್ರೆ ತನ್ನ ಲುಕ್‌ ಕಳೆದುಕೊಳ್ಳದಂತೆ ಕಾಪಾಡಬಹುದು.

* ನಾನ್‌ಸ್ಟಿಕ್ ಪ್ಯಾನ್‌ಗೆ ಸ್ಟೀಲ್‌ ಸೌಟ್‌ ಬಳಸದೆ, ಮರದ ಸೌಟು ಉಪಯೋಗಿಸಿದರೆ ಉತ್ತಮ.

* ಆಹಾರ, ತರಕಾರಿಗಳನ್ನು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಸಂಗ್ರಹಿಸಿ ಇಡಬೇಡಿ. ಅದಕ್ಕಾಗಿ ಪ್ರತ್ಯೇಕ ಪಾತ್ರೆ ಬಳಸಬೇಕು.

* ನಾನ್‌ಸ್ಟಿಕ್‌ ಪ್ಯಾನ್‌ಗೆ ಕುಕ್ಕಿಂಗ್ ಸ್ಪ್ರೇ ಹಾಕಬಾರದು.

* ನಾನ್‌ಸ್ಟಿಕ್ ಪ್ಯಾನ್ ತೊಳೆಯುವಾಗ ಸ್ಕ್ರಬ್ಬರ್‌ ಆಯ್ಕೆಯಲ್ಲಿ ಎಚ್ಚರ‌ ವಹಿಸಬೇಕು ಹಾಗೂ ನಾನ್‌ಸ್ಟಿಕ್ ಪ್ಯಾನ್‌ ಅನ್ನು ತುಂಬಾ ತಿಕ್ಕಬಾರದು.

* ಟೊಮೆಟೊ, ನಿಂಬೆಹಣ್ಣು ಹಾಕಿ ಮಾಡುವ ಅಡುಗೆಯನ್ನು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಮಾಡದಿರುವುದು ಸೂಕ್ತ.

* ನಾನ್‌ಸ್ಟಿಕ್‌ ಪ್ಯಾನ್‌ ಅನ್ನು ತೊಳೆದು ನೇತುಹಾಕಿ, ಕಿಚನ್‌ನಲ್ಲಿ ಅಷ್ಟೊಂದು ಸ್ಥಳಾವಕಾಶ ಇಲ್ಲದಿದ್ದರೆ ನಾನ್‌ಸ್ಟಿಕ್‌ ಪಾತ್ರೆ ಮೇಲೆ ಇತರ ಪಾತ್ರೆ ಇಡಬಾರದು.

* ನಾನ್‌ಸ್ಟಿಕ್‌ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಉರಿ ಕಡಿಮೆ ಅಥವಾ ಸಾಧಾರಣವಾಗಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...