alex Certify ‘How To Murder Your Husband’ ಪುಸ್ತಕ ಬರೆದ ಲೇಖಕಿಯಿಂದಲೇ ನಡೆದಿತ್ತು ಗಂಡನ ಕೊಲೆ: ಪುಸ್ತದಲ್ಲಿತ್ತು ಅಪರಾಧದ ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘How To Murder Your Husband’ ಪುಸ್ತಕ ಬರೆದ ಲೇಖಕಿಯಿಂದಲೇ ನಡೆದಿತ್ತು ಗಂಡನ ಕೊಲೆ: ಪುಸ್ತದಲ್ಲಿತ್ತು ಅಪರಾಧದ ಸಾಕ್ಷಿ

ಆಕೆ ಅದ್ಭುತ ಬರಹಗಾರ್ತಿ…. ಆಕೆ ಬರೆದ ಪುಸ್ತಕ ‘How To Murder Your Husband’ ಸಸ್ಪೆನ್ಸ್ ಥ್ರಿಲರ್‌ ಕಥಾವಸ್ತು ಹೊಂದಿರೋ ಪುಸ್ತಕ. ಆ ಪುಸ್ತಕಕ್ಕೆ ಭಾರೀ ಜನಮೆಚ್ಚುಗೆ ಕೂಡಾ ಸಿಕ್ಕಿತ್ತು. ಅದು ಗಂಡನನ್ನ ಕೊಲ್ಲೊ ಕಥಾ ಹಂದರ ಹೊಂದಿರೋ ಪುಸ್ತಕ.

ಈಗ ಅದೇ ಪುಸ್ತಕದಲ್ಲಿರೋ ಹಂತಕಿಯಂತೆಯೇ, ಈ ಲೇಖಕಿ ಕೂಡಾ ತನ್ನ ಗಂಡನನ್ನ ಕೊಂದಿರೋದು ಸಾಬೀತಾಗಿದೆ. ಪೊಲೀಸರಿಗೆ ಅಪರಾಧಿಯ ಸುಳಿವು ಸಿಕ್ಕಿದ್ದು ಇದೇ ಪುಸ್ತಕದಿಂದ.

ಈ ಲೇಖಕಿ ವಯಸ್ಸು 71. ಹೆಸರು ನ್ಯಾನ್ಸಿ ಕ್ರಾಂಪ್ಟನ್‌ ಬ್ರೋ. ಈಕೆ ಮೇಲೆ ತನ್ನ ಗಂಡನ ಕೊಲೆ ಕೇಸಿನಲ್ಲಿ ಸೆಕೆಂಡ್‌ ಡಿಗ್ರಿ ಹಂತಕಿ ಅನ್ನೊ ಆರೋಪವಿದೆ. 63 ವರ್ಷದ ಡೇನಿಯಲ್‌ ಬ್ರೋಫಿ, ಯುಎಸ್‌ನ ಬರೆಗಾನ್‌ ಕುಕ್ಕಿಂಗ್‌ ಶಾಲೆಯಲ್ಲಿ ಶೇಫ್‌ (ಬಾಣಸಿಗ) ಆಗಿ ಕೆಲಸ ಮಾಡುತ್ತಿದ್ದ. 2018 ರಲ್ಲಿ ಡೇನಿಯಲ್‌ ಶವವಾಗಿ ಪತ್ತೆಯಾಗಿದ್ದರು. ಬೆನ್ನಿಗೆ ಮತ್ತು ಎದೆಗೆ ಗುಂಡು ಹೊಡೆದು ಕೊಲೆ ಮಾಡಲಾಗಿತ್ತು. ಪೊಲೀಸರ ತನಿಖೆ ನಂತರ ನ್ಯಾನ್ಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.

BIG NEWS: ಬೆಂಗಳೂರು ವಿವಿ ಬಂದ್ ಗೆ ಕರೆ; ನಾಳೆ ತೀವ್ರಗೊಳ್ಳಲಿದೆ ವಿದ್ಯಾರ್ಥಿಗಳ ಪ್ರತಿಭಟನೆ

ಪೊಲೀಸರ ವಿಚಾರಣೆಯ ನಂತರ ಪೋರ್ಟಲ್ಯಾಂಡ್‌ನ ಮಲ್ಡನೋಮಾ ಕೌಂಟಿ ನ್ಯಾಯಾಧಿಶರು ನ್ಯಾನ್ಸಿಯನ್ನ ಎರಡನೇ ಹಂತದ ಕೊಲೆಗೆ ತಪ್ಪಿತಸ್ಥರೆಂದು ಕಂಡುಕೊಂಡಿದ್ದಾರೆ. ನ್ಯಾನ್ಸಿ ಕ್ರಾಂಪ್ಟನ್—ಬ್ರಾಫಿಗೆ ಜೂನ್ 13ರಂದು ಶಿಕ್ಷೆ ಪ್ರಕಟಿಸಲಾಗುವುದು ಅಂತ ಕೋರ್ಟ್ ಹೇಳಿದೆ. ದಿ ರಾಂಗ್ ಲವರ್, ದಿ ರಾಂಗ್ ಹಸ್ಬೆಂಡ್‌ನಂತಹ ಪುಸ್ತಕಗಳನ್ನ ಬರೆದಿರೋ ನ್ಯಾನ್ಸಿ ಉತ್ತಮ ಬರಹಗಾರ್ತಿ ಅಂತ ಹೆಸರು ಗಳಿಸಿದ್ದರು.

How To Murder Your Husband’ ಪುಸ್ತಕದಲ್ಲಿ ಬರೆದಿರೋ ರೀತಿಯಲ್ಲೇ ನ್ಯಾನ್ಸಿ ತಮ್ಮ ಗಂಡನನ್ನ ಕೊಂದಿದ್ದಾರೆ ಅನುಮಾನ ಪೊಲೀಸರಿಗೆ ಇತ್ತು. ವಿಚಾರಣೆಯಲ್ಲಿ ನ್ಯಾನ್ಸಿ ಕೂಡಾ ಅದನ್ನ ಒಪ್ಪಿಕೊಂಡಿದ್ದಾರೆ. ಗಂಡನಿಗೆ ಗುಂಡು ಹೊಡೆದು ಸಾಯಿಸಿದ್ದಾರೆ ಅಂತ ಆರೋಪಿ ಎದುರಾಳಿ ವಕೀಲರು ವಾದಿಸಿದ್ದಾರೆ. ಅದನ್ನ ಆರೋಪಿ ನ್ಯಾನ್ಸಿ ಒಪ್ಪಿಕೊಂಡಿದ್ದಾರೆ ಅಂತ ಕೂಡಾ ಹೇಳಲಾಗುತ್ತಿದೆ. ಸಿಸಿ‌ ಟಿವಿಯಲ್ಲಿ ಇದರ ಕುರಿತಾಗಿ ಸಾಕ್ಷಿಗಳು ಸಿಕ್ಕಿವೆ. ಆದರೆ ಅಪರಾಧ ಮಾಡಲು ಬಳಸಿರೋ ಗನ್‌ ಮಾತ್ರ ಇನ್ನೂವರೆಗೂ ಸಿಕ್ಕಿಲ್ಲ.

ಈ ಕೊಲೆಯನ್ನ ಜೀವ ವಿಮಾ ಹಣದ ಸಲುವಾಗಿ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ಆದರೆ ಇದುವರೆಗೂ ಈ ಕೊಲೆಯ ಹಿಂದಿರೋ ಅಸಲಿ ಉದ್ದೇಶ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...