ಗುಲಾಬ್ ಜಾಮೂನ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟವಾದ ಸ್ವೀಟ್. ಸಾಮಾನ್ಯವಾಗಿ ಇನ್ ಸ್ಟಂಟ್ ಹಿಟ್ಟಿನಿಂದ ಜಾಮೂನು ಮಾಡೋದು ಎಲ್ರಿಗೂ ಗೊತ್ತಿದೆ. ಡಿಫರೆಂಟ್ ಆದ, ರುಚಿಯಾದ ಬ್ರೆಡ್ ಗುಲಾಬ್ ಜಾಮೂನು ಮಾಡೋದು ಹೇಗೆ ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ : ಸಕ್ಕರೆ ಒಂದು ಕಪ್, ಒಂದು ಕಪ್ ನೀರು, ಏಲಕ್ಕಿ ಪುಡಿ, ನಿಂಬೆ ರಸ, 5-6 ಪೀಸ್ ಬ್ರೆಡ್, ಹಾಲಿನ ಪುಡಿ, ಫ್ರೆಶ್ ಕ್ರೀಮ್, ಹಾಲು, ಕರಿಯಲು ಎಣ್ಣೆ
ಬ್ರೆಡ್ ಗುಲಾಬ್ ಜಾಮೂನ್ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ, ಒಂದು ಕಪ್ ನೀರು ಹಾಕಿ ನಾಲ್ಕು ನಿಮಿಷ ಕುದಿಸಿ, ಅದಕ್ಕೆ ಚಿಟಿಕೆ ಏಲಕ್ಕಿ ಪುಡಿ, ನಾಲ್ಕು ಹನಿ ನಿಂಬೆ ರಸ ಹಾಕಿ. ಉರಿಯನ್ನು ಸಣ್ಣಗೆ ಮಾಡಿ ಮುಚ್ಚಳ ಮುಚ್ಚಿಡಿ.
5-6 ಬ್ರೆಡ್ ಸ್ಲೈಸ್ ತೆಗೆದುಕೊಂಡು ಸೈಡ್ಸ್ ಕಟ್ ಮಾಡಿ, ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿದ ಬ್ರೆಡ್ ಗೆ ಒಂದು ಚಮಚ ಹಾಲಿನ ಪುಡಿ, ಒಂದು ಚಮಚ ಫ್ರೆಶ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಹಾಲು ಹಾಕಿ ಜಾಮೂನು ಹಿಟ್ಟಿನ ಹದಕ್ಕೆ ಕಲಸಿ. ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ನಂತರ ಆ ಉಂಡೆಗಳನ್ನು ಬಿಸಿ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ. 2 ಗಂಟೆ ಮುಚ್ಚಳ ಮುಚ್ಚಿಡಿ. ನಂತರ ಸಕ್ಕರೆ ಪಾಕದ ಜೊತೆ ಸವಿಯಾದ ಬ್ರೆಡ್ ಗುಲಾಬ್ ಜಾಮೂನ್ ಸವಿಯಲು ಸಿದ್ಧ.