alex Certify ಕಾಂತಿಹೀನ ಆಭರಣಗಳು ಹೊಳೆಯುವಂತೆ ಮಾಡುವುದು ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂತಿಹೀನ ಆಭರಣಗಳು ಹೊಳೆಯುವಂತೆ ಮಾಡುವುದು ಹೇಗೆ…..?

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ?
ಕೆಲವು ಆಭರಣಗಳು ವಿಶಿಷ್ಟ ಹವಾಮಾನಕ್ಕೆ ಕಳೆಗುಂದುತ್ತವೆ.
ಮುಖ್ಯವಾದ ವಿಷಯವೆಂದರೆ….

* ಯಾವುದೇ ಆಭರಣ ಧರಿಸಿ ಮಲಗಬಾರದು. ಆಭರಣಗಳನ್ನು ಹತ್ತಿಯಿಂದ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸಿದ ಆಭರಣಗಳನ್ನು ಹಾಗೆಯೇ ತೆಗೆದಿಡದೆ ಸುರಕ್ಷಿತ ಪೆಟ್ಟಿಗೆಯಲ್ಲಿಡಬೇಕು.

* ಆಭರಣ ಧರಿಸಿದ ಜಾಗದ ಬಳಿ ಸೌಂದರ್ಯ ಪ್ರಸಾಧನ ಇಲ್ಲವೇ ಸುಗಂಧ ದ್ರವ್ಯದ ನೇರ ಬಳಕೆ ಆಗದಂತೆ ನೋಡಿಕೊಳ್ಳಬೇಕು.

* ಕಬ್ಬಿಣ ಅಂಶ ಹೊಂದಿರುವ ಪಾಲಕ್, ಮೆಂತ್ಯ ಮುಂತಾದ ಸೊಪ್ಪುಗಳನ್ನು ಕುದಿಸಿ. ಉಳಿದ ನೀರು ತಂಪಾದ ಬಳಿಕ ಅದರಲ್ಲಿ ಸ್ವಲ್ಪ ಹೊತ್ತು ಆಭರಣ ಹಾಕಿ. ನಂತರ ಬ್ರಷ್ ನಿಂದ ಉಜ್ಜಿದರೆ ಆಭರಣ ಮತ್ತೆ ಮೊದಲಿನ ಹೊಳಪು ಪಡೆಯುತ್ತದೆ.

* ಹಳೆಯ ಟೂತ್ ಬ್ರಷ್ ಮೇಲೆ ಸ್ವಲ್ಪ ಪೇಸ್ಟ್ ಹಾಕಿಕೊಂಡು ಧೂಳು ಸೇರಿಕೊಂಡ ಆಭರಣದ ಮೇಲೆ ತಿಕ್ಕಿ.

* ಆಲೂಗಡ್ಡೆ ಹೋಳು ಅಥವಾ ಆಲೂಗಡ್ಡೆ ಕುದಿಸಿದ ನೀರಿನಿಂದ ಕೂಡ ಆಭರಣಗಳನ್ನು ಸ್ವಚ್ಛ ಮಾಡಬಹುದು.

* ಸಕ್ಕರೆ ಬೆರೆಸಿದ ನೀರಿನಲ್ಲಿ ಆಭರಣಗಳನ್ನು ಸ್ವಚ್ಛಗೊಳಿಸುವುದರಿಂದಲೂ ಹೊಳಪು ತರಬಹುದು.

* ಚಿನ್ನದ ಚೈನ್ ನಲ್ಲಿ ಗಂಟು ಬಿದ್ದಿದ್ದರೆ, ಆ ಜಾಗದಲ್ಲಿ ಪೌಡರ್ ಹಾಕಿ. ಗಂಟು ಬಿಚ್ಚಲು ಅನುಕೂಲವಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...