ಪುಟಾಣಿ ಮಕ್ಕಳು ನಿದ್ದೆ ಮಾಡಿದಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಮಕ್ಕಳಂತೂ ನಿದ್ದೆ ಮಾಡಲು ಒಲ್ಲೆ ಎನ್ನುತ್ತವೆ. ದಿನವಿಡೀ ಹಠ ಮಾಡಿ ರಂಪ ಎಬ್ಬಿಸುತ್ತವೆ. ಅಂಥ ಮಕ್ಕಳಿಗೆ ನಿದ್ದೆ ಬರಿಸುವುದು ಹೇಗೆ ?
ಮಲಗುವ ಕೋಣೆಯನ್ನು ಕತ್ತಲಾಗಿಸಿ. ಮಗು ಮಲಗಿದ ಬಳಿಕ ಬೇಕಿದ್ದರೆ ಜೀರೋ ಲೈಟ್ ಹಾಕಿ. ಒತ್ತಾಯಕ್ಕೆ ಮಲಗಿಸದಿರಿ. ನಿದ್ದೆ ಬರುವ ತನಕ ಅದನ್ನು ಆಡಿಸಿ. ನಿಮಗೆ ಕೆಲಸದ ತುರ್ತು ಇದೆ ಎಂದು ಮಗುವನ್ನು ಮಲಗಿಸಲು ಹೊರಟರೆ ಅದು ನಿದ್ದೆ ಮಾಡಲು ಕೇಳದೆ ಹಠ ಹಿಡಿಯಬಹುದು.
ಮಸಾಜ್ ಮಾಡುವ ಮೂಲಕ ಮಗುವಿಗೆ ನಿದ್ದೆ ಬರುವಂತೆ ಮಾಡಿ. ಒಮ್ಮೆ ಮಸಾಜ್ ಗೆ ಒಗ್ಗಿಕೊಂಡ ಮಗು ನಿತ್ಯ ಬಹುಬೇಗ ಮಲಗುತ್ತದೆ. ಮಗುವಿನ ಜೊತೆ ನೀವೂ ಮಲಗಿಕೊಂಡರೆ ನಿಮ್ಮ ದೇಹದ ಬಿಸಿ ಸದಾ ಬೇಕೆಂದು ಅದು ಅಳಬಹುದು.
ಹೆಚ್ಚು ಸದ್ದು ಇರುವ ಕಡೆ ಮಕ್ಕಳು ಮಲಗಲು ಕೇಳುವುದಿಲ್ಲ. ಹಾಗಾಗಿ ಮಗು ಮಲಗುವ ಕೋಣೆಯ ಅತ್ತ ಇತ್ತ ಸದ್ದು ಮಾಡದಿರಿ. ಫ್ಯಾನ್ ಹಾಗೂ ಸಣ್ಣ ದನಿಯ ಸಂಗೀತದ ದನಿಗೆ ಮಗು ಮಲಗುವಂತೆ ಮಾಡಿ.