ನಿಮ್ಮ ಆಧಾರ್ ಕಾರ್ಡ್‌ಅನ್ನು ಪಾನ್‌ನೊಂದಿಗೆ ಲಿಂಕ್ ಮಾಡಲು ಪದೇ ಪದೇ ಅನೇಕ ಸಂಸ್ಥೆಗಳು ಹಾಗೂ ಇಲಾಖೆಗಳು ಮನವಿ ಮಾಡುತ್ತಲೇ ಇದ್ದು, ಈ ಸಂಬಂಧ ಹೊಸ ಡೆಡ್ಲೈನ್‌ಗಳನ್ನು ವಿಧಿಸುತ್ತಲೇ ಇವೆ.
ಕೆಳಗಿನ ಪ್ರಕ್ರಿಯೆಗಳನ್ನು ಆನ್ಲೈನ್‌ನಲ್ಲಿ ಮಾಡುವ ಮೂಲಕ ಆಧಾರ್-ಪಾನ್ ಲಿಂಕಿಂಗ್ ಕೆಲಸವನ್ನು ನೀವು ಮನೆಯಲ್ಲೇ ಕುಳಿತು ಮಾಡಿ ಮುಗಿಸಬಹುದಾಗಿದೆ.
ಉಚಿತ ಸಿಲಿಂಡರ್: ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
1. ಇ-ಫೈಲಿಂಗ್ ಪೋರ್ಟಲ್ 2.0ಗೆ ಭೇಟಿ ಕೊಡಿ.
2. ‘Our Services’ ಟ್ಯಾಬ್ ತೆರೆಯಿರಿ.
3. ‘Link Aadhaar’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
4. ಹೊಸ ಪೇಜ್‌ನಲ್ಲಿ ನಿಮ್ಮ ಪಾನ್ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಹೆಸರುಗಳನ್ನು ನಮೂದಿಸಿ.
5. ಈಗ “I agree to validate my Aadhaar details’ ಮೇಲೆ ಕ್ಲಿಕ್ ಮಾಡಿ.
6. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ ಓಟಿಪಿಯನ್ನು ಎಂಟರ್ ಮಾಡಿ “Validate” ಕ್ಲಿಕ್ ಮಾಡಿ.
7. ಕ್ಲಿಕ್ ಮಾಡುತ್ತಲೇ ಪಾನ್-ಆಧಾರ್ ಲಿಂಕಿಂಗ್ ನಿಮ್ಮ ಕೋರಿಕೆಯನ್ನು ಸಲ್ಲಿಸಲಾಗಿದೆ ಎಂದು ಖಾತ್ರಿ ಪಡಿಸುವ ಪಾಪ್‌ಅಪ್ ಮೆಸೇಜ್ ಒಂದು ಬರುತ್ತದೆ.