
ಪ್ರಾಚೀನ ಕಾಲದಿಂದಲೂ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಇದು ಆಂಟಿ ಬಯೋಟಿಕ್, ಆಂಟಿ ಫಂಗಲ್, ನಂಜು ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೌಂದರ್ಯ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ.
*ಬೆಳ್ಳುಳ್ಳಿ, ಕಲೆಗಳು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ತುಂಬಾ ಉಪಯುಕ್ತವಾಗಿದೆ. ಹಾಗಾಗಿ ಬೆಳ್ಳುಳ್ಳಿಯ ತುಂಡನ್ನು ತೆಗೆದುಕೊಂಡು ಅದನ್ನು ಪೀಡಿತ ಭಾಗಕ್ಕೆ ಉಜ್ಜಿಕೊಳ್ಳಿ. ಬಳಿಕ ಸೋಫು ಬಳಸಿ ವಾಶ್ ಮಾಡಿ. ಇದು ನಿಮ್ಮ ಚರ್ಮವನ್ನು ಸ್ವಚ್ಚವಾಗಿಡುತ್ತದೆ. ಹಾನಿಯಾದ ಚರ್ಮವನ್ನು ಸರಿಪಡಿಸುತ್ತದೆ.
*ಇದು ಕೂದಲ ಆರೋಗ್ಯವನ್ನು ಕಾಪಾಡುತ್ತದೆ. ಇದು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಗೆ ಲವಂಗ ಪುಡಿ ಸೇರಿಸಿ ಯಾವುದಾದರೂ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ನೀರಿನಲ್ಲಿ ವಾಶ್ ಮಾಡಿ.