ಹಂತ:1 ಮೊದಲಿಗೆ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಸೆಟ್ಟಿಂಗ್ಗಳಲ್ಲಿ ಮತ್ತೊಮ್ಮೆ ಟ್ಯಾಪ್ ಮಾಡಿ ಮತ್ತು ನಂತರ ಖಾತೆ ವಿಭಾಗ > ಗೌಪ್ಯತೆಗೆ ಹೋಗಿ.
ಹಂತ:4 ಗೌಪ್ಯತೆ ವಿಭಾಗದಲ್ಲಿ, ನೀವು ಪ್ರೊಫೈಲ್ ಫೋಟೋ ಆಯ್ಕೆಯನ್ನು ಕಾಣಬಹುದು.
ಹಂತ:5 ಇದರಲ್ಲಿ ನಿಮ್ಮ ಪ್ರೊಫೈಲ್ ಪಿಕ್ ಮೇಲೆ ಟ್ಯಾಪ್ ಮಾಡಿ.
ಹಂತ:6 ಇದೀಗ ನೀವು ಎಲ್ಲರೂ, ನನ್ನ ಸಂಪರ್ಕಗಳು ಮತ್ತು ಯಾರೂ ಸೇರಿದಂತೆ ಮೂರು ಆಯ್ಕೆಗಳನ್ನು ಕಾಣುತ್ತೀರಿ.
ಹಂತ:7 ಪಟ್ಟಿ ಮಾಡದ ಸಂಪರ್ಕಗಳು ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಲು ನೀವು ಬಯಸದಿದ್ದರೆ “ನನ್ನ ಸಂಪರ್ಕಗಳು” ಆಯ್ಕೆಯನ್ನು ಆಯ್ಕೆ ಮಾಡಬಹುದು.
ನಿಮ್ಮ ವಾಟ್ಸಾಪ್ ಪ್ರೊಫೈಲ್ ಚಿತ್ರಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಮೂಲಕ, ಈ ವೈಯಕ್ತಿಕ ಚಿತ್ರವನ್ನು ಯಾರು ವೀಕ್ಷಿಸಬಹುದು ಎಂಬುದರ ಮೇಲೆ ನೀವು ಹೆಚ್ಚಿನ ನಿಯಂತ್ರಣವನ್ನು ಪಡೆಯುತ್ತೀರಿ. ಈ ಮೂಲಕ ಒಟ್ಟಾರೆ ಆನ್ ಲೈನ್ ಭದ್ರತೆಯನ್ನು ಹೆಚ್ಚಿಸಬಹುದು ಮತ್ತು ಗೌಪ್ಯತೆ ಉಲ್ಲಂಘನೆಯ ಅಪಾಯವನ್ನು ಕಡಿಮೆ ಮಾಡಬಹುದು.