alex Certify ಯಾಕೆ ಜನಿಸುತ್ತವೆ ಅವಳಿ ಮಕ್ಕಳು….? ಇತ್ತೀಚಿಗೆ ಹೆಚ್ಚಾಗಿದೆ ಇದ್ರ ಪ್ರಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾಕೆ ಜನಿಸುತ್ತವೆ ಅವಳಿ ಮಕ್ಕಳು….? ಇತ್ತೀಚಿಗೆ ಹೆಚ್ಚಾಗಿದೆ ಇದ್ರ ಪ್ರಮಾಣ

ಅವಳಿ ಮಕ್ಕಳ ಬಗ್ಗೆ ಅನೇಕ ವರ್ಷಗಳಿಂದಲೂ ಸಂಶೋಧನೆಗಳು ನಡೆಯುತ್ತಿವೆ. ಅವಳಿ ಮಕ್ಕಳು ಜನಿಸಲು ಕಾರಣವೇನು? ಕೆಲ ಅವಳಿಗಳು ಒಂದೇ ರೂಪದಲ್ಲಿರಲು ಕಾರಣವೇನು? ಕೆಲ ಅವಳಿಗಳ ರೂಪ ಭಿನ್ನವಾಗಿರಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಅವಳಿಗಳ ಜನನ, ಆಕಸ್ಮಿಕವಾಗಿ ಸಂಭವಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಆದರೆ ಹೊಸ ಅಧ್ಯಯನವು ಇದು ನಿಜವಲ್ಲ ಎಂದಿದೆ. ಆಮ್ಸ್ಟರ್‌ಡ್ಯಾಮ್‌ನ ವೃಜೆ ಯೂನಿವರ್ಸಿಟಿಯಟ್ ಸಂಶೋಧಕರು ಇದು ಡಿಎನ್‌ಎಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಗರ್ಭಧಾರಣೆಯಿಂದ ಪ್ರೌಢಾವಸ್ಥೆಯವರೆಗೆ ಮುಂದುವರಿಯುತ್ತದೆ. ಸುಮಾರು ಶೇಕಡಾ 12ರಷ್ಟು ಗರ್ಭಧಾರಣೆಗಳಲ್ಲಿ ಅವಳಿಗಳ ಸಾಧ್ಯತೆ ಇರುತ್ತದೆ. ಆದ್ರೆ ಕೇವಲ ಶೇಕಡಾ 2ರಷ್ಟು ಪ್ರಕರಣಗಳಲ್ಲಿ ಮಾತ್ರ ಅವಳಿ ಮಕ್ಕಳ ಹೆರಿಗೆಯಾಗುತ್ತದೆ.

ಒಂದೇ ರೀತಿಯ ಅವಳಿಗಳು ಹೇಗೆ ಜನಿಸಲು ಸಾಧ್ಯ ಎಂಬ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ಇದು ಕೂಡ ಡಿಎನ್ಎ ಅವಲಂಭಿಸಿದೆ ಎಂದು ತಜ್ಞರು ಹೇಳಿದ್ದಾರೆ. ಫಲವತ್ತಾದ ಎಗ್, ಎರಡು ಭ್ರೂಣಗಳಾಗಿ ವಿಭಜನೆಯಾದ ನಂತರ ಅವಳಿ ಮಕ್ಕಳ ಜನನವಾಗಿದೆ.

ಇತ್ತೀಚಿನ ದಿನಗಳಲ್ಲಿ ಅವಳಿ ಮಕ್ಕಳ ಜನನ ಹೆಚ್ಚಾಗಿದೆ. ಐವಿಎಫ್ ಮತ್ತು ಕೃತಕ ಗರ್ಭಧಾರಣೆ ಹೆಚ್ಚಳದಿಂದಾಗಿ, ಪ್ರತಿ 42 ಮಕ್ಕಳಲ್ಲಿ ಒಬ್ಬರು ಈಗ ಅವಳಿಗಳಾಗಿ ಜನಿಸಿದ್ದಾರೆ ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 1.6 ಮಿಲಿಯನ್ ಅವಳಿಗಳು ಜನಿಸುತ್ತವೆ.

ಅವಳಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಇನ್ನೊಂದು ಕಾರಣವೆಂದರೆ ಕಳೆದ ದಶಕಗಳಲ್ಲಿ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ಗರ್ಭಧಾರಣೆ ವಿಳಂಬವಾಗಿರುವುದು. ಅಧ್ಯಯನದ ಪ್ರಕಾರ, ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಮುಟ್ಟು ನಿಲ್ಲಲು ಬರ್ತಿದ್ದಂತೆ ಮಹಿಳೆಯರ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. ಪ್ರಪಂಚದ ಎಲ್ಲಾ ಅವಳಿಗಳಲ್ಲಿ ಸುಮಾರು ಶೇಕಡಾ 80 ರಷ್ಟು ಏಷ್ಯಾ ಮತ್ತು ಆಫ್ರಿಕಾದಲ್ಲಿ ಜನಿಸುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...