ಗಂಡು ಮಗುವನ್ನು ಹೆರುವಂತೆ ಒತ್ತಾಯಿಸಿ ಮಾವ- ಅತ್ತೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೈಕೋರ್ಟ್ ಮೊರೆ ಹೋದ ಆಘಾತಕಾರಿ ವಿಚಿತ್ರ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಗಂಡು ಮಗು ಹೆರಲು ಒತ್ತಾಯಿಸಿ ಮದುವೆಯ ದಿನದಂದು ತನಗೆ ‘ಸೂಚನೆ’ ನೀಡಲಾಗಿದೆ, ಅಲ್ಲದೇ ಮದುವೆಯ ಮಾರನೇ ದಿನ ಫಸ್ಟ್ ನೈಟ್ ದಿನದಂದೇ ಗಂಡು ಮಗು ಹೆರುವುದು ಹೇಗೆ ಎಂಬ ಪುಸ್ತಕವನ್ನು ನನಗೆ ನೀಡಿ ಒತ್ತಾಯಿಸಲಾಗಿದೆ ಎಂದು ಮಹಿಳೆ ಕೋರ್ಟ್ ನಲ್ಲಿ ಹೇಳಿದ್ದಾಳೆ. ಗಂಡು ಮಗುವಿನ ಜನನಕ್ಕೆ ಒತ್ತಾಯಿಸುವುದು ನೈತಿಕತೆಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದ್ದು, ಘಟನೆಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮುವಾಟ್ಟುಪುಳ, ವಜಪಿಲ್ಲಿ, ಮುದವೂರ್ ಮಣಿಮಲಕಲ್ಲತ್, ಥಾಮಸ್ ಜೋಸೆಫ್ ಮತ್ತು ಸಲೀಮಾ ಜೋಸೆಫ್ ಅವರನ್ನು ಬೆಂಬಲಿಸಿ ವಕೀಲರು ಇದನ್ನು ಉಲ್ಲೇಖಿಸಿದ್ದಾರೆ. ಪ್ರತ್ಯುತ್ತರ ಅಫಿಡವಿಟ್ ಸಲ್ಲಿಸಲು ಸಮಯವನ್ನು ಕೋರಲಾಯಿತು.
ಕೊಲ್ಲಂ ಮೂಲದ ಆಶ್ಲಾ ರಾಯ್ ತನ್ನ ಪತಿ ಮತ್ತು ಕುಟುಂಬದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಪತಿ ಇಂಗ್ಲೆಂಡಿನಲ್ಲಿದ್ದಾರೆ. ಪ್ರಸವಪೂರ್ವ ರೋಗನಿರ್ಣಯ ವಿಭಾಗದ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತನ್ನ ಅತ್ತೆ ಮಾವನ ವಿರುದ್ಧದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯ ಅರ್ಜಿಯಲ್ಲಿ ತಿಳಿಸಲಾಗಿದೆ. ಗಂಡು ಮಗುವಿಗೆ ಜನ್ಮ ನೀಡುವಂತೆ ಯುವತಿಗೆ ಲಿಖಿತ ಸೂಚನೆ ನೀಡಲಾಗಿದೆ.
ಮದುವೆ ಆದ ದಿನದಿಂದಲೇ ನನಗೆ ಗಂಡು ಮಗು ನೀಡುವಂತೆ ಒತ್ತಾಯಿಸಲಾಗಿದೆ. ಅಲ್ಲದೇ 2014 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ತನ್ನ ಅತ್ತೆ ಮಾವಂದಿರು ತನಗೆ ಚಿತ್ರಹಿಂಸೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಮಾನಸಿಕ ಸ್ಥಿತಿ ಸರಿ ಇಲ್ಲದ ಕಾರಣ ದೂರು ದಾಖಲಿಸಲು ವಿಳಂಬ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.
ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಇದುವರೆಗೂ ಮಗುವನ್ನು ನೋಡಲು ಬರಲಿಲ್ಲ, ತಾವು ಬಾಣಂತನ ಮುಗಿಸಿ ಅತ್ತೆ ಮನೆಗೆ ಹೋದಾಗ ಕೇವಲ 1 ತಿಂಗಳಲ್ಲಿ ಅಲ್ಲಿಂದ ವಾಪಸ್ ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ತನಿಖೆ ನಡೆಸುವಂತೆ ಪ್ರಸವಪೂರ್ವ ರೋಗನಿರ್ಣಯ ವಿಭಾಗದ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಗೆ ಸೂಚನೆ ನೀಡಿದೆ.