
ಮಹಿಳಾ ಆರ್ ಸಿಬಿ ತಂಡದ ಸದಸ್ಯೆ ಇಂಗ್ಲೆಂಡ್ ಕ್ರಿಕೆಟಿಗರಾದ ಹೀದರ್ ನೈಟ್ ತನ್ನ WPL (ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್) ಸದಸ್ಯರೊಂದಿಗೆ ಹೋಳಿ ಆಡಿದ ನಂತರ ತನ್ನ ಕೂದಲಿನಿಂದ ಗುಲಾಬಿ ಬಣ್ಣವನ್ನು ತೆಗೆದುಹಾಕಲು ಹೆಣಗಾಡುತ್ತಿದ್ದಾರೆ. ಅದನ್ನು ತೆಗೆಯಲು ಪ್ರತಿಕ್ರಿಯೆಯಾಗಿ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರಶ್ನಿಸಿರುವ ಅವರು “ಹೊಂಬಣ್ಣದ ಕೂದಲಿನಿಂದ ಗುಲಾಬಿ ಹೋಳಿ ಪುಡಿಯನ್ನು ಹೇಗೆ ತೆಗೆಯುವುದು ಎಂದು ಯಾರಿಗಾದರೂ ತಿಳಿದಿದೆಯೇ? ಸ್ನೇಹಿತರಿಗಾಗಿ ಕೇಳಲಾಗುತ್ತಿದೆ…” ಎಂದಿದ್ದಾರೆ. ಇದಕ್ಕೆ ಭಾರತೀಯರು ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ.