ನಿಮ್ಮ ಮುಖದ ಅಲ್ಲಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿವೆಯೇ? ಇದನ್ನು ತೆಗೆದು ಹಾಕಿ ಮತ್ತೆ ಹದಿಹರೆಯದವರಂತೆ ಕಾಣಿಸಿಕೊಳ್ಳುವ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ…
ದಿನಕ್ಕೆ 3 ರಿಂದ 4 ಲೀಟರ್ ನಷ್ಟು ನೀರು ಕುಡಿಯುವುದು ಬಹಳ ಒಳ್ಳೆಯದು. ಇದು ನಿಮ್ಮ ತ್ವಚೆ ಡ್ರೈ ಆಗದಂತೆ ನೋಡಿಕೊಳ್ಳುತ್ತದೆ. ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ ಗೆ 1 ಚಮಚ ಜೇನುತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ತ್ವಚೆಯ ಮೇಲೆ ಹಚ್ಚಿ. 15 ನಿಮಿಷದ ಬಳಿಕ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡಿದರೆ ಅತ್ಯುತ್ತಮ ಫಲಿತಾಂಶ ಪಡೆಯಬಹುದು.
ಸಾಂಬಾರ ಪದಾರ್ಥವಾಗಿ ಬಳಸುವ ಲವಂಗ ಎಣ್ಣೆಗೆ ಒಂದು ಚಮಚ ತೆಂಗಿನಕಾಯಿ ಎಣ್ಣೆಯನ್ನು ಬೆರೆಸಿ. ಇದನ್ನು ಮುಖದ ಮೇಲೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಮುಖ ತೊಳೆದರೆ ನಿಮ್ಮ ತ್ವಚೆ ಮೇಲಿನ ಸುಕ್ಕು ನೆರಿಗೆಗಳು ದೂರವಾಗುತ್ತದೆ. ಶುಂಠಿಯನ್ನು ಇದೇ ರೀತಿಯಾಗಿ ಬಳಸಬಹುದು.