ಇದು ಡಿಜಿಟಲ್ ಯುಗ. ಜನರು ಶಾಪಿಂಗ್ ನಿಂದ ಹಿಡಿದು ಬ್ಯಾಂಕಿಂಗ್ ವರೆಗೆ ಎಲ್ಲ ಕೆಲಸವನ್ನು ಮೊಬೈಲ್ ನಲ್ಲಿ ಮಾಡ್ತಾರೆ. ಮೊಬೈಲ್ ನಲ್ಲಿಯೇ ಕುಳಿತು ಜನರು ಬ್ಯಾಂಕಿನ ಕೆಲಸ ಮುಗಿಸ್ತಾರೆ. ಹಣ ವರ್ಗಾವಣೆಯನ್ನು ಮೊಬೈಲ್ ಮೂಲಕ ಮಾಡುವ ಜನರು, ಪಾಸ್ ಬುಕ್ ನಲ್ಲಿ ಎಂಟ್ರಿ ಮಾಡಿಸುವುದಿಲ್ಲ. ಹಾಗಾಗಿ ಯಾವ್ಯಾವಾಗ ಎಷ್ಟು ಹಣ ವರ್ಗಾವಣೆ ಮಾಡಲಾಗಿದೆ ಎಂಬ ವಿವರ ಸಿಗುವುದಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್ ನಲ್ಲಿ ಒಂದೆರಡು ವರ್ಷಗಳ ಹಿಂದಿನ ಮಾಹಿತಿ ಸಿಗುವುದಿಲ್ಲ. ಆದ್ರೆ 5 ವರ್ಷ ಹಿಂದಿನ ಸ್ಟೇಟ್ಮೆಂಟನ್ನು ಸುಲಭವಾಗಿ ತೆಗೆಯಬಹುದು.
ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತು ಮಾಹಿತಿ ನೀಡಿದೆ. ವೆಬ್ಸೈಟ್ನಿಂದ ಮೂರು ವರ್ಷಗಳ ಹಿಂದಿನ ಸ್ಟೇಟ್ಮೆಂಟ್ ಹಿಂಪಡೆಯಬಹುದು. ಇದಕ್ಕಿಂತ ಹಳೆಯ ಮಾಹಿತಿ ಬೇಕಾದಲ್ಲಿ ಬ್ಯಾಂಕ್ ಶಾಖೆಗೆ ಹೋಗಬೇಕು. ಕೆಲವು ಪ್ರಮುಖ ದಾಖಲೆಗಳನ್ನು ತೋರಿಸಿದ್ರೆ ಬ್ಯಾಂಕ್ ನಿಮಗೆ ಹಳೆ ಮಾಹಿತಿ ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಆನ್ಲೈನ್ ಪಾಸ್ಬುಕ್ ಅಪ್ಲಿಕೇಶನ್ ಮೂಲಕ ಕೇವಲ 90 ದಿನಗಳ ಹಳೆಯ ಸ್ಟೇಟ್ಮೆಂಟ್ ಪಡೆಯಬಹುದು. ಪಿಎನ್ಬಿ ಯ ಇ-ಸ್ಟೇಟ್ಮೆಂಟ್ಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಬ್ಯಾಂಕ್ ಗೆ ಇಮೇಲ್ ಅಥವಾ ಎಸ್ಎಂಎಸ್ ಕಳುಹಿಸುವ ಈ ಸೌಲಭ್ಯ ಪಡೆಯಬಹುದು.