ನಿಮ್ಮ ಮತದಾರರ ಗುರುತಿನ ಚೀಟಿ ಕಳುವಾಗಿದ್ದಲ್ಲಿ ನೀವೀಗ ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತುಕೊಂಡು ಆನ್ಲೈನ್ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಬಹುದು.
ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಕೆಳಕಂಡ ಪ್ರಕ್ರಿಯೆಗಳ ಮೂಲಕ ಡೌನ್ಲೋಡ್ ಮಾಡಬಹುದು:
1. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ ಭೇಟಿ ಕೊಡಿ — https://www.nvsp.in/.
2. ಜಾಲತಾಣ ತೆರೆಯುತ್ತಲೇ ನಿಮಗೆ e-EPIC ಕಾರ್ಡ್‌ನ ಆಯ್ಕೆ ಬರುತ್ತದೆ, ಕ್ಲಿಕ್ ಮಾಡಿ.
3. ಇದಾದ ಬಳಿಕ ನೀವು ನಿಮ್ಮ ಹೆಸರು, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಟೈಪ್ ಮಾಡಿ ಲಾಗಿನ್ ಆಗಿ.
4. ನೀವು ಅದಾಗಲೇ ನೋಂದಣಿಯಾಗದೇ ಇದ್ದರೆ, ಹೊಸ ಬಳಕೆದಾರರಾಗಿ ನೋಂದಣಿಯಾಗಿ.
5. ಇದಾದ ಬಳಿಕ ನಿಮಗೆ EPIC ಸಂಖ್ಯೆ ಹಾಗೂ ರೆಫರೆನ್ಸ್ ಸಂಖ್ಯೆಯ ಆಯ್ಕೆ ಬರುತ್ತದೆ.
6. ನೀವು ಹೊಸ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ, ನೀವು ರೆಫ್ರೆನ್ಸ್ ಸಂಖ್ಯೆಯ ಆಯ್ಕೆ ಮಾಡಬೇಕು. ಅದಾಗಲೇ ಮತದಾರರ ಗುರುತಿನ ಚೀಟಿ ಪಡೆದಿದ್ದರೆ EPIC ಸಂಖ್ಯೆ ಆಯ್ಕೆ ಮಾಡಬೇಕು.
7. ಇದಾದ ಬಳಿಕ EPIC ಸಂಖ್ಯೆ ಎಂಟರ್ ಮಾಡಿದ ಬಳಿಕ, ನಿಮ್ಮ ರಾಜ್ಯ ಆಯ್ಕೆ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
8. ನೀವು ಡೌನ್ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
9. ಓಟಿಪಿ ಎಂಟರ್ ಮಾಡುತ್ತಲೇ ನಿಮ್ಮ ಮತದಾರರ ಗುರುತಿನ ಚೀಟಿ ಡೌನ್ಲೋಡ್ ಆಗುತ್ತದೆ.