ನವದೆಹಲಿ: ಭಾರತೀಯ ಚುನಾವಣಾ ಆಯೋಗ ಜನರ ಅನುಕೂಲಕ್ಕಾಗಿ ಡಿಜಿಟಲ್ ಮತದಾರರ ಗುರುತಿನ ಚೀಟಿ ಸೇವೆ ಶುರು ಮಾಡಿದೆ. ಇನ್ಮುಂದೆ ಮತದಾರರ ಗುರುತಿನ ಚೀಟಿ ಮುದ್ರಿಸುವ ಅಗತ್ಯವಿಲ್ಲ. ಮೊಬೈಲ್ ನಲ್ಲಿಯೇ ಮತದಾರರ ಚೀಟಿಯನ್ನು ಇಟ್ಟುಕೊಳ್ಳಬಹುದು.
ಇದನ್ನು ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡೆಂಟಿಟಿ ಕಾರ್ಡ್( ಇ-ಇಪಿಐಸಿ) ಎಂದು ಕರೆಯಲಾಗುತ್ತದೆ. ಇದು ಡಿಜಿಟಲ್ ಆಧಾರ್ ರೀತಿಯಲ್ಲೇ ಇರುತ್ತದೆ. ಇಲ್ಲಿಯೇ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಬಹುದು.