alex Certify ಶ್ವಾಸಕೋಶದ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ….? ಇಲ್ಲಿದೆ ರೋಗ ಲಕ್ಷಣಗಳು ಮತ್ತು ಕಾರಣಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾಸಕೋಶದ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ….? ಇಲ್ಲಿದೆ ರೋಗ ಲಕ್ಷಣಗಳು ಮತ್ತು ಕಾರಣಗಳ ವಿವರ

ಕನ್ನಡ ಚಿತ್ರರಂಗದ ಪಾಲಿಗೆ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಜುಲೈ 11 ರ ಗುರುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಆಕೆಗೆ 57 ವರ್ಷ ವಯಸ್ಸಾಗಿತ್ತು. ಆಕೆಯ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ ಅಪರ್ಣಾ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಪತಿ ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ವಾಸ್ತುಶಿಲ್ಪಿ ನಾಗರಾಜ್ ವಸ್ತಾರೆ.

ಕನ್ನಡದ ಪ್ರಸಿದ್ಧ ನಿರೂಪಕಿ ಹಾಗೂ ನಟಿ ಅಪರ್ಣಾ ವಸ್ತಾರೆ ಅವರ ಹಠಾತ್‌ ನಿಧನ ಇಡೀ ಕರುನಾಡಿಗೇ ಆಘಾತ ತಂದಿದೆ. ಶ್ವಾಸಕೋಶದ ಕ್ಯಾನ್ಸರ್‌ನ ಕರಾಳತೆ ಬಗ್ಗೆ ಜನರು ಆತಂಕಕ್ಕೀಡಾಗಿದ್ದಾರೆ. ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್‌ನಿಂದಲೇ ಇಹಲೋಕ ತ್ಯಜಿಸಿದ್ದಾರೆ. ಹಾಗಾಗಿ ಶ್ವಾಸಕೋಶದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.

ಇದೊಂದು ಗಂಭೀರ ಕಾಯಿಲೆಯಾಗಿದ್ದು, ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾದರೆ ಆರಂಭದಲ್ಲಿ ಯಾವುದೇ ಸಂಕೇತಗಳು ಗೋಚರಿಸುವುದಿಲ್ಲ. ಅದು ಮುಂದುವರೆದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅವುಗಳನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರ ಬಳಿಗೆ ಹೋಗಬೇಕು.

ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣಗಳು…

ನಿರಂತರ ಕೆಮ್ಮು

ಕೆಮ್ಮಿನಲ್ಲಿ ರಕ್ತ

ಉಸಿರಾಟದ ತೊಂದರೆ

ಎದೆ ನೋವು

ನಗುವಾಗ ಎದೆನೋವು

ಆಳವಾದ ಉಸಿರು ತೆಗೆದುಕೊಳ್ಳುವಾಗ ಎದೆನೋವು

ಧ್ವನಿಯ ಒರಟುತನ

ಹಠಾತ್ ಮತ್ತು ವಿವರಿಸಲಾಗದ ತೂಕ ನಷ್ಟ

ದಣಿವು ಮತ್ತು ದುರ್ಬಲ ಭಾವನೆ

ಪದೇ ಪದೇ ಶ್ವಾಸಕೋಶದ ಸೋಂಕು

ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣ…

ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.  ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಮಾಲಿನ್ಯವೂ ಕಾರಣವಾಗಿದೆ. ಕ್ಯಾನ್ಸರ್‌ನಿಂದ ದೂರವಿರಲು ಧೂಮಪಾನ ತ್ಯಜಿಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...