ಕೂದಲು ಬೆಳ್ಳಗಾಗುತ್ತಿದೆಯೇ? ಅದನ್ನು ರಾಸಾಯನಿಕಯುಕ್ತ ಡೈಗಳ ಬಳಕೆಯಿಲ್ಲದೆಯೂ ಮತ್ತೆ ಕಪ್ಪಾಗಿಸಿಕೊಳ್ಳಬಹುದು. ಹೇಗೆಂದಿರಾ?
ಆಲೂಗಡ್ಡೆ ಸಿಪ್ಪೆಯನ್ನು ತೆಗೆದಿಟ್ಟು ಎರಡು ಕಪ್ ನೀರಿನಲ್ಲಿ ಹತ್ತು ನಿಮಿಷ ಕುದಿಸಿ. ಈ ನೀರನ್ನು ತಲೆ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ನೀರಿನಿಂದ ತೊಳೆಯಿರಿ.
ತುಪ್ಪ ಕೂದಲಿನ ಬಣ್ಣವನ್ನು ಕಾಪಾಡುತ್ತದೆ. ಇದು ನೈಸರ್ಗಿಕ ಪೋಷಣೆ ನೀಡುತ್ತದೆ. ಮತ್ತೆ ಕಪ್ಪು ಬಣ್ಣವನ್ನು ಮರುಕಳಿಸುತ್ತದೆ. ಇದಕ್ಕಾಗಿ ವಾರದಲ್ಲಿ ಎರಡು ಬಾರಿ ತುಪ್ಪದಿಂದ ಕೂದಲು ಮಸಾಜ್ ಮಾಡಿ.
ಕಾಫಿ ಬೀಜದ ಪುಡಿಯನ್ನು ನೀರಿಗೆ ಬೆರೆಸಿ. ದಪ್ಪನೆಯ ಪೇಸ್ಟ್ ತಯಾರಿಸಿ ಈ ಪೇಸ್ಟನ್ನು ಕೂದಲಿಗೆ ಹಚ್ಚಿ, 45 ನಿಮಿಷಗಳ ಬಳಿಕ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಬೆಳ್ಳಗಿನ ಕೂದಲು ಕಪ್ಪಗಾಗುತ್ತವೆ.