ಮಹಿಳೆಯರ ಕೈಗಳಿಗೆ ಅಂದ ನೀಡುತ್ತೆ ಮೆಹಂದಿ. ಗೋರಂಟಿ ಬಣ್ಣ ಗಾಢವಾಗಿ ಮೂಡಿದ್ರೆ ಆಕರ್ಷಕವಾಗಿ ಕಾಣುತ್ತೆ. ಗೋರಂಟಿ ಬಣ್ಣ ಗಾಢವಾಗಿ ಬಂದಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ನಿಮ್ಮ ಮೆಹಂದಿ ರಂಗನ್ನು ಹೆಚ್ಚಿಸುತ್ತದೆ.
ಮೆಹಂದಿ ಹಚ್ಚಿದ ಕೈಯನ್ನು ಎಂದೂ ನೀರಿನಲ್ಲಿ ತೊಳೆಯಬೇಡಿ. ಒಣಗಿದ ನಂತ್ರ ಉದುರಿಸಿ ತೆಗೆಯಿರಿ. ಇಲ್ಲ ಬೆಣ್ಣೆ ಹಚ್ಚಿ ಮೆಹಂದಿಯನ್ನು ತೆಗೆಯಿರಿ. ನೀರು ಹಾಕಿದ್ರೆ ಮೆಹಂದಿ ಬಣ್ಣ ಗಾಢವಾಗಿ ಮೂಡುವುದಿಲ್ಲ.
ಮೆಹಂದಿ ಹಚ್ಚಿದ ನಂತ್ರ ಅದ್ರ ಮೇಲೆ ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆಯ ಮಿಶ್ರಣವನ್ನು ಆಗಾಗ ಚಿಮುಕಿಸುತ್ತಿರಿ. ಇದ್ರಿಂದ ಮೆಹಂದಿ ಬೇಗ ಒಣಗುವುದಿಲ್ಲ. ಹಾಗೆ ಗಾಢ ಬಣ್ಣ ಬಿಡುತ್ತದೆ.
ರಾತ್ರಿ ಪೂರ್ತಿ ಮೆಹಂದಿ ಕೈನಲ್ಲಿದ್ದು ಬೆಳಿಗ್ಗೆ ತೆಗೆಯುವವರು ಕೈಗೆ ವಿಕ್ಸ್ ಅಥವಾ ಅಯೋಡೆಕ್ಸ್ ಹಚ್ಚಿ. ಇದ್ರಿಂದ ಮೆಹಂದಿ ಬಣ್ಣ ಗಾಢವಾಗಿ ಕಾಣುತ್ತದೆ.
ಮೆಹಂದಿ ತೆಗೆದ ನಂತ್ರ ಒಂದು ಪ್ಯಾನ್ ಗೆ 10-15 ಲವಂಗ ಹಾಕಿ ಬಿಸಿ ಮಾಡಿ. ಅದ್ರ ಉಗಿಯನ್ನು ಕೈಗೆ ಹಿಡಿಯಿರಿ.
ವ್ಯಾಕ್ಸಿಂಗ್ ಅಥವಾ ಸ್ಕ್ರಬ್ಬಿಂಗ್ ಮಾಡುವ ಮೊದಲು ಮೆಹಂದಿ ಹಚ್ಚಬೇಡಿ. ಮೆಹಂದಿ ಹಚ್ಚಿದ ನಂತ್ರ ವ್ಯಾಕ್ಸಿಂಗ್ ಮಾಡಿದಲ್ಲಿ ಮೆಹಂದಿ ಬಣ್ಣ ಗಾಢವಾಗುವುದಿಲ್ಲ.