ಕಾಫಿ, ಟೀ ಸೋಸುವ ಜಾಲರಿಯನ್ನು ಪ್ರತಿ ನಿತ್ಯ ಬಳಸುವುದರಿಂದ ಅವು ಬೇಗ ಕಲೆಯಾಗುತ್ತವೆ. ಅವುಗಳನ್ನು ಎಷ್ಟು ಉಜ್ಜಿದರೂ ಕಲೆ ಹಾಗೆ ಉಳಿದುಕೊಂಡಿರುತ್ತವೆ. ಕೆಲ ಸರಳ ವಿಧಾನ ಅನುಸರಿಸುವುದರ ಮೂಲಕ ಕಾಫಿ-ಟೀ ಸೋಸುವ ಜಾಲರಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
* ಪ್ಲಾಸ್ಟಿಕ್ ಹಿಡಿ ಇರುವ ಜಾಲರಿಗೆ ಮೊದಲು ಸೋಪನ್ನು ಚೆನ್ನಾಗಿ ಸವರಿ ನಂತರ ಅರ್ಧ ಗಂಟೆ ಬಿಟ್ಟು ಹಳೆಯ ಟೂತ್ ಬ್ರಷ್‌ನಿಂದ ಎಲ್ಲಾ ಭಾಗದಲ್ಲೂ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆದರೆ ಕಲೆ ಹೋಗಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
* ಸ್ಟೀಲ್ ಹಿಡಿ ಇರುವ ಜಾಲರಿಗಳನ್ನು ಸ್ವಚ್ಚಗೊಳಿಸಬೇಕಾದರೆ ಗ್ಯಾಸ್ ಸ್ಟವ್ ಅನ್ನು ಹಚ್ಚಿ ಕಡಿಮೆ ಉರಿಯಲ್ಲಿ ಇಡಿ. ನಂತರ ಸ್ಟೀಲ್ ಜಾಲರಿಯನ್ನು ಬಿಸಿ ಮಾಡಿ ಆಗ ಕಲೆಗಳೆಲ್ಲ ಸುಟ್ಟು ಕಪ್ಪು ಬಣ್ಣಗೆ ಬರುತ್ತದೆ. ನಂತರ ಟೂತ್‌ಬ್ರಷ್‌ನಿಂದ ಉಜ್ಜಿ ಮಸಿಯೆನ್ನೆಲ್ಲಾ ಉದುರಿಸಿ. ನಂತರ ವಾಷಿಂಗ್ ಸೋಪ್ ಅಥವಾ ಲಿಕ್ವಿಡ್ ಹಾಕಿ ಟೂತ್‌ಬ್ರಷ್ ಸಹಾಯದಿಂದ ಚೆನ್ನಾಗಿ ಉಜ್ಜಿ ನೀರಿನಲ್ಲಿ ತೊಳೆದರೆ ಕಲೆಗಳು ಹೋಗಿ ಫಳ ಫಳ ಹೊಳೆಯುತ್ತವೆ.
* ಒಂದು ಬೌಲ್‌ನಲ್ಲಿ ವಿನಿಗರ್ ಹಾಕಿ ಅದಕ್ಕೆ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ ನಂತರ ಅದರಲ್ಲಿ ಸ್ಟೀಲ್ ಜಾಲರಿಯನ್ನು ನೆನಸಿ. ನಂತರ ವಾಷಿಂಗ್ ಲಿಕ್ವಿಡ್ ಅಥವಾ ಸೋಪ್ ಬಳಸಿ ಟೂತ್‌ಬ್ರಷ್‌ನಿಂದ ಉಜ್ಜಿ ನೀರಿನಲ್ಲಿ ತೊಳೆದರೆ ಕಲೆಗಳು ಹೋಗುತ್ತವೆ.