ಎಲ್ಲರೂ ಇಷ್ಟಪಡುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ನೇರಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರ ರುಚಿ ಹುಳಿ-ಸಿಹಿ ಮಿಶ್ರಿತವಾಗಿರುತ್ತದೆ. ಏಪ್ರಿಲ್ ನಿಂದ ಜುಲೈನವರೆಗೆ ಈ ಹಣ್ಣಿನ ಸವಿಯನ್ನು ಸವಿಯಬಹುದು.
ನೇರಳೆ ಹಣ್ಣಿನಲ್ಲಿ ಸಾಕಷ್ಟು ವಿಧಗಳಿವೆ. ಕೆಲವು ಆಕಾರದಲ್ಲಿ ದೊಡ್ಡ, ಸಣ್ಣಕಿದ್ದರೆ, ಮತ್ತೆ ಹಣ್ಣಿನ ರುಚಿಯಲ್ಲೂ ಬದಲಾವಣೆಯಿರುತ್ತದೆ. ನೇರಳೆ ಹಣ್ಣು ಖರೀದಿ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನೇರಳೆ ಹಣ್ಣು ಕಂಡ ತಕ್ಷಣ ಖರೀದಿಗೆ ಹೋಗಬೇಡಿ. ಮೊದಲು ಒಂದು ಹಣ್ಣನ್ನು ತಿಂದು ರುಚಿ ನೋಡಿದ ನಂತ್ರವೇ ಖರೀದಿ ಮಾಡಿ.
ಕೆಲ ಅಂಗಡಿಯವರು ಹಣ್ಣು ತಾಜಾ ಕಾಣಲಿ ಎನ್ನುವ ಕಾರಣಕ್ಕೆ ಎಣ್ಣೆಯನ್ನು ಹಾಕಿರುತ್ತಾರೆ. ಹಣ್ಣನ್ನು ತಿಂದು ನೋಡಿದಾಗ ನಿಮಗೆ ವ್ಯತ್ಯಾಸ ತಿಳಿಯುತ್ತದೆ.
ಸ್ವಲ್ಪ ಗಟ್ಟಿಯಿರುವ ಹಣ್ಣನ್ನೇ ಖರೀದಿ ಮಾಡಿ. ತುಂಬಾ ಮೆದುವಾಗಿದ್ದರೆ ಹಣ್ಣು ನಾಲ್ಕೈದು ದಿನ ಇಡಲು ಬರುವುದಿಲ್ಲ.
ಅಂಗಡಿಯಿಂದ ಖರೀದಿಸಿ ತಂದ ನೇರಳೆ ಹಣ್ಣನ್ನು ರಕ್ಷಿಸುವ ವಿಧಾನ ಕೂಡ ಗೊತ್ತಿರಬೇಕಾಗುತ್ತದೆ.
ಅಂಗಡಿಯಿಂದ ತಂದ ಹಣ್ಣನ್ನು ಫ್ರಿಜ್ ನಲ್ಲಿಡಿ. ಫ್ರಿಜ್ ನಿಂದ ಹೊರಗಿಟ್ಟರೆ ನೇರಳೆ ಹಣ್ಣು 1-2 ದಿನ ಮಾತ್ರ ಸರಿಯಿರುತ್ತದೆ.
ಒಂದು ಪಾತ್ರೆಯಲ್ಲಿ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಹಣ್ಣನ್ನು ಫ್ರಿಜ್ ನಲ್ಲಿಡಬೇಕು.