ಬೆಂಗಳೂರು : ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು , ನೇರವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈಗಾಗಲೇ ನೀವು
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ್ದರೆ, ಯಶಸ್ವಿಯಾಗಿ ಲಿಂಕ್ ಆಗಿದಿಯೋ ಇಲ್ವೋ ಎಂದು ಚೆಕ್ ಮಾಡುವುದು ಹೇಗೆ ? ಇಲ್ಲಿದೆ ನೋಡಿ ಮಾಹಿತಿ.
ಫೋನ್ ಕರೆ ಮೂಲಕ
ಹಂತ 1: ಆಧಾರ್ ನೋಂದಾಯಿತ ಫೋನ್ ಸಂಖ್ಯೆಯೊಂದಿಗೆ *99*99*1# ಡಯಲ್ ಮಾಡಿ
ಹಂತ 2: 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಈಗ, ಸಂಖ್ಯೆಯನ್ನು ಮತ್ತೆ ನಮೂದಿಸಿ
ಹಂತ 4: ಸಲ್ಲಿಸಿದ ನಂತರ, ಲಿಂಕ್ ಆಗಿರುವ ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ
ಅಧಿಕೃತ ವೆಬ್ ಸೈಟ್ ಮೂಲಕ
ಹಂತ 1: ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಹಂತ 2: ‘ಮೈ ಆಧಾರ್’ ಅಡಿಯಲ್ಲಿ, ‘ಆಧಾರ್ ಸೇವೆಗಳು’ ಕ್ಲಿಕ್ ಮಾಡಿ
ಹಂತ 3: ನಂತರ, ‘ಆಧಾರ್ ಲಿಂಕ್ ಸ್ಥಿತಿ’ ಆಯ್ಕೆ ಮಾಡಿ
ಹಂತ 4: 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಿ
ಹಂತ 5: ‘ಸೆಂಡ್ ಒಟಿಪಿ’ ಕ್ಲಿಕ್ ಮಾಡಿ
ಹಂತ 6: ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸಿ ಮತ್ತು ಸಲ್ಲಿಸಿ
ಈ ರೀತಿ ಸಬ್ಮಿಟ್ ಕೊಟ್ಟ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ Your aadhar not linked to a bank ಎನ್ನುವ ಸಂದೇಶ ಬರುತ್ತದೆ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ATM ಗಳ ಮೂಲಕ ಕೂಡ ಮಾಡಿಸಬಹುದು, ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.