ಯುನಿವರ್ಸಲ್ ಅಕೌಂಟ್ ನಂಬರನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದು ಅವಶ್ಯಕ. ಅಕೌಂಟ್ ನಂಬರ್ ಲಿಂಕ್ ಮಾಡದಿದ್ದರೆ ಪಿಎಫ್ ಹಣಕ್ಕೆ ತೊಂದರೆಯಾಗಲಿದೆ. ಕಂಪನಿ, ಇಪಿಎಫ್‌ಒನ ನಿಮ್ಮ ಖಾತೆಗೆ ಹಣ ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ.
ಹಾಗೆ ಇಪಿಎಫ್‌ಒನಿಂದ ಹಣವನ್ನು ಹಿಂಪಡೆಯಲು ಖಾತೆದಾರರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಪಿಎಫ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ.
ಯುಎಎನ್ ಮತ್ತು ಆಧಾರ್ ಎರಡು ಲಿಂಕ್ ಆಗಿದ್ಯಾ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಮೊದಲು https://unifiedportal-mem.epfindia.gov.in/memberinterface/ ಗೆ ಹೋಗಬೇಕು. ಅಲ್ಲಿ ಯುಎಎನ್ ಪಾಸ್ವರ್ಡ್ ನಮೂದಿಸುವ ಮೂಲಕ ಖಾತೆಗೆ ಲಾಗಿನ್ ಆಗ್ಬೇಕು. ಲಾಗ್ ಇನ್ ಆದ್ಮೇಲೆ ಕೆವೈಸಿ ಆಯ್ಕೆಯನ್ನು ಆರಿಸಬೇಕು. ನಂತ್ರ ವೆರಿಫೈ ಡಾಕ್ಯುಮೆಂಟ್ ಟ್ಯಾಗ್ ಗೆ ಹೋಗಬೇಕು. ಅಲ್ಲಿ ಆಧಾರ್ ಸಂಖ್ಯೆ ಕಾಣ್ತಿದೆಯೇ ಎಂಬುದನ್ನು ಪರಿಶೀಲಿಸಿ.ಆಧಾರ್ ಸಂಖ್ಯೆ ಕಂಡಲ್ಲಿ, ನಿಮ್ಮ ಪಿಎಫ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಅರ್ಥ. ಒಂದು ವೇಳೆ ಆಧಾರ್ ಸಂಖ್ಯೆ ಕಾಣದೆ ಹೋದಲ್ಲಿ ಲಿಂಕ್ ಮಾಡುವ ಅವಶ್ಯಕತೆಯಿರುತ್ತದೆ. ಇದಕ್ಕೆ ನವೆಂಬರ್ 30 ಕೊನೆ ದಿನವಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ನಂಬರ್ ಲಿಂಕ್ ಮಾಎಬೇಕಾಗುತ್ತದೆ.
ಯುಎಎನ್-ಆಧಾರ್ ಲಿಂಕ್ ಮಾಡುವುದು ಕಷ್ಟದ ಕೆಲಸವಲ್ಲ. ಮೊದಲು ಪೋರ್ಟಲ್ ಗೆ ಹೋಗಲು https://unifiedportal-mem.epfindia.gov.in/ ಗೆ ಲಾಗಿನ್ ಆಗ್ಬೇಕು. ಮ್ಯಾನೇಜ್ ಟ್ಯಾಬ್ ಅಡಿಯಲ್ಲಿ ಕೆವೈಸಿ ಆಯ್ಕೆಯನ್ನು ಆಯ್ಕೆಮಾಡಬೇಕು. ಕೆವೈಸಿ ಡಾಕ್ಯುಮೆಂಟ್ ಲಿಂಕ್ ಮಾಡಲು ಆಧಾರ್ ಆಯ್ಕೆಯನ್ನು ಮಾಡಬೇಕು. ಆಧಾರ್‌ನಲ್ಲಿ ನೀಡಲಾದ ಹೆಸರು ಪರದೆಯ ಮೇಲೆ ಕಾಣಿಸುತ್ತದೆ. ಈಗ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆ ಬೇಡವೆಂದ್ರೆ ವರ್ಚುವಲ್ ಐಡಿ ಸಂಖ್ಯೆಯನ್ನು ನೀಡಬಹುದು. ಆಧಾರ್‌ನೊಂದಿಗೆ ಯುಎಎನ್ ಲಿಂಕ್ ಮಾಡಲು, ಆಧಾರ್ ಆಧಾರಿತ ದೃಢೀಕರಣಕ್ಕೆ ಅನುಮೋದನೆಯನ್ನು ನೀಡಬೇಕಾಗುತ್ತದೆ. ನಂತ್ರ ಉಳಿಸು ಬಟನ್ ಕ್ಲಿಕ್ ಮಾಡಬೇಕು. ಆಧಾರ್‌ನೊಂದಿಗೆ ಯುಎಎನ್ ಲಿಂಕ್ ಮಾಡಲು ಉದ್ಯೋಗದಾತರ ಅನುಮೋದನೆಯ ಅಗತ್ಯವಿದೆ. ಉದ್ಯೋಗದಾತರು ಒಪ್ಪಿಗೆ ನೀಡಿದ ನಂತ್ರ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.