alex Certify ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾಗಿದೆಯಾ ಎಂಬದನ್ನು ಹೀಗೆ ಪರೀಕ್ಷಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾಗಿದೆಯಾ ಎಂಬದನ್ನು ಹೀಗೆ ಪರೀಕ್ಷಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾಗಿ ಕಾಡ್ತಾ ಇದೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಾಗ ಹಲವು ರೀತಿಯ ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು.

ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿದ್ದು, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇವೆ. ಇವೆರಡೂ ಸಮತೋಲನದಲ್ಲಿರುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಯಾವುದನ್ನೂ ನೀವು ನಿರ್ಲಕ್ಷಿಸಬಾರದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವ ಲಕ್ಷಣಗಳು ಕಾಣುತ್ತವೆ ಎಂಬುದನ್ನು ತಿಳಿದುಕೊಂಡ್ರೆ ಅಪಾಯವನ್ನು ಮೊದಲೇ ಊಹಿಸಬಹುದು.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಚರ್ಮದ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಚರ್ಮದ ಮೇಲೆ ಕಿತ್ತಳೆ, ಹಳದಿ ಗುರುತುಗಳು ಕಂಡುಬಂದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಯಾಕಂದ್ರೆ ಇದು ಕೊಲೆಸ್ಟ್ರಾಲ್‌ ಹೆಚ್ಚಾಗಿರುವ ಲಕ್ಷಣವಾಗಿದೆ. ಇದಲ್ಲದೆ ಈ ರೀತಿಯ ಕಲೆಗಳು ಹೃದ್ರೋಗದ ಸಂಕೇತವೂ ಆಗಿರಬಹುದು.

ನಿಮ್ಮ ಕಣ್ಣುಗಳ ಮೇಲೆ ಹಳದಿ ದದ್ದು ಅಥವಾ ಕ್ರಸ್ಟ್ ಇದ್ದರೆ, ಈ ರೋಗ ಲಕ್ಷಣವನ್ನು ನಿರ್ಲಕ್ಷಿಸಬಾರದು. ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಿದೆ ಎಂಬುದಕ್ಕೆ ಪ್ರಮುಖ ಚಿಹ್ನೆಗಳಲ್ಲಿ ಇದು ಒಂದಾಗಿದೆ. ರಕ್ತದಲ್ಲಿ ಕೊಬ್ಬಿನ ಕೊರತೆಯಿರುವಾಗ ಇದು ಸಂಭವಿಸುತ್ತದೆ. ಇದಲ್ಲದೆ ಕಣ್ಣುಗಳ ಮೇಲೆ ಹಳದಿ ದದ್ದುಗಳು ಕಾಣಿಸಿಕೊಳ್ಳುವುದು ಸಕ್ಕರೆ ಕಾಯಿಲೆಯ ಲಕ್ಷಣವೂ ಹೌದು.

ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ಕೈ ಮತ್ತು ಕಾಲುಗಳ ಚರ್ಮದ ಮೇಲೆ ಒಂದು ರೀತಿಯ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಕೈ ಮತ್ತು ಕಾಲುಗಳ ಚರ್ಮದಲ್ಲಿ ನೋವು ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...