alex Certify ಆಧಾರ್ ಕಾರ್ಡ್ ನಲ್ಲಿರುವ `ಫೋನ್ ನಂಬರ್’ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ನಲ್ಲಿರುವ `ಫೋನ್ ನಂಬರ್’ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಇವತ್ತಿನ ದಿನಮಾನದಲ್ಲಿ ಬಹುಮುಖ್ಯವಾದ ದಾಖಲೆ ಎಂದರೆ ಆಧಾರ್‌ ಕಾರ್ಡ್‌. ಮೊಬೈಲ್‌ ಸಿಮ್‌ ಖರೀದಿ, ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು, ಸರಕಾರಿ ಯೋಜನೆಗಳ ಫಲಾನುಭವಿ ಆಗಲು ಆಧಾರ್‌ ಕಾರ್ಡ್‌ ಕಡ್ಡಾಯ ದಾಖಲೆಯಾಗಿದೆ.

ಇದರೊಂದಿಗೆ ಮತ್ತಷ್ಟು ಮುಖ್ಯ ಎಂದರೆ ಆಧಾರ್‌ ಸಂಖ್ಯೆಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌. ಆ ನಂಬರ್‌ ಅನ್ನು ನೀವು ಪಾಡಿಕೊಂಡಷ್ಟು ಕೂಡ ’ಒಟಿಪಿ’ ಪಡೆದು ಆಧಾರ್‌ ನೋಂದಣಿ ಪ್ರಮಾಣೀಕರಣ ವ್ಯವಸ್ಥೆ ಸುಲಭವಾಗಲಿದೆ.

ಒಂದು ವೇಳೆ ಆಧಾರ್‌ಗೆ ಜೋಡಣೆಯಾಗಿದ್ದ ಮೊಬೈಲ್‌ ಸಂಖ್ಯೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾದಲ್ಲಿ, ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸುಲಭವಾಗಿ ಮೊಬೈಲ್‌ ನಂಬರ್‌ ಬದಲಾಯಿಸಬಹುದು.

ಅದಕ್ಕೆ ಕೆಳಗಿನ ಹಂತಗಳನ್ನು ಪಾಲಿಸಿರಿ,

  1. ಯುಐಡಿಎಐ (ವಿಶಿಷ್ಟ ಗುರುತು ಪ್ರಾಧಿಕಾರ) ವೆಬ್‌ಸೈಟ್‌ಗೆ ಭೇಟಿ ನೀಡಿರಿ. (ask.uidai.gov.in)
  2. ಅದರಲ್ಲಿ ಫೋನ್‌ ಸಂಖ್ಯೆ ಬದಲಾವಣೆ ವಿಭಾಗಕ್ಕೆ ಭೇಟಿ ನೀಡಿರಿ. ಅಲ್ಲಿರುವ ಕ್ಯಾಪ್‌ಚಾ ಮತ್ತು ಇತರ ಮಾಹಿತಿಗಳನ್ನು ತುಂಬಿರಿ.
  3. ನಿಮ್ಮ ಆಧಾರ್‌ ಜೋಡಣೆಯಾದ ಮೊಬೈಲ್‌ ನಂಬರ್‌ಗೆ ’ಒಟಿಪಿ’ ಸ್ವೀಕೃತವಾಗಲಿದೆ. ಆ ಸಂಖ್ಯೆಯನ್ನು ನಿಮ್ಮ ಪರದೆಯ ಮೇಲೆ ಕಾಣಿಸುವ ಜಾಗದಲ್ಲಿ ನಮೂದಿಸಿರಿ. ಸಬ್‌ಮಿಟ್‌ ಒಟಿಪಿ ಮತ್ತು ಮುಂದೆ ಸಾಗಿರಿ ಬಟನ್‌ ಒತ್ತಿರಿ.
  4. ಬಳಿಕ ಆನ್‌ಲೈನ್‌ ಆಧಾರ್‌ ಸೇವೆಗಳ ವಿಭಾಗಕ್ಕೆ ತೆರಳಿರಿ. ಅಲ್ಲಿ ನಿಮ್ಮ ಹೆಸರು ಸೇರಿದಂತೆ ವಿವಿಧ ಮಾಹಿತಿಗಳ ಪರಿಷ್ಕರಣೆಗೂ ಅವಕಾಶವಿದೆ. ಅಗತ್ಯವಿದ್ದಲ್ಲಿ ಬಳಸಬಹುದು. ಎಲ್ಲದಕ್ಕೂ ನೋಂದಾಯಿಯ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಯಾವ ಮಾಹಿತಿಯನ್ನು ಅಪ್‌ಡೇಟ್‌ ಮಾಡಲು ಬಯಸುತ್ತೀರಿ ಎನ್ನುವುದನ್ನು ಮುಂಚೆಯೇ ನಿರ್ಧರಿಸಿಕೊಂಡು ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿರಿ.
  5. ಒಂದು ವೇಳೆ ಅಗತ್ಯ ಪರಿಷ್ಕರಣೆ ಸಾಧ್ಯವಾಗದಿದ್ದರೆ ಸಮೀಪದ ಆಧಾರ್‌ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಕನಿಷ್ಠ ಶುಲ್ಕ ಪಾವತಿಸಿ ಸೇವೆ ಪಡೆದುಕೊಳ್ಳಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...