ಮಾರುಕಟ್ಟೆಗಳಲ್ಲಿ ಅಥವಾ ಬೇರೆ ಪ್ರದೇಶಗಳಲ್ಲಿ ನಮಗೆ ಹರಿದ ನೋಟುಗಳು ಸಿಗ್ತಿರುತ್ತವೆ. ಕೆಲವೊಮ್ಮೆ ಪರ್ಸ್ ನಲ್ಲಿಟ್ಟಿರುವ ನೋಟುಗಳು ಹರಿದಿರುತ್ತವೆ. ಈ ನೋಟುಗಳ ಬಗ್ಗೆ ನಮಗೆ ಸಾಮಾನ್ಯವಾಗಿ ಟೆನ್ಷನ್ ಇರುತ್ತದೆ. ಆದ್ರೆ ತಲೆಬಿಸಿ ಬೇಡ. ಈ ನೋಟುಗಳನ್ನು ಬ್ಯಾಂಕಿನಿಂದ ಸುಲಭವಾಗಿ ಬದಲಾಯಿಸಬಹುದು.
ಹರಿದ ನೋಟುಗಳಿಗೆ ತಕ್ಕಂತೆ ಬ್ಯಾಂಕ್ ಹಣವನ್ನು ನೀಡುತ್ತದೆ. ಆರ್‌ಬಿಐ ಪ್ರಕಾರ, ಪ್ರತಿ ಬ್ಯಾಂಕ್ ಹಳೆಯ, ಹರಿದ ಅಥವಾ ವಿರೂಪಗೊಂಡ ನೋಟುಗಳನ್ನು ಸ್ವೀಕರಿಸಬೇಕು. ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ನೋಟುಗಳನ್ನು ಬದಲಾಯಿಸಬಹುದು. ಇದಕ್ಕೆ ಬ್ಯಾಂಕ್ ಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಕೆಟ್ಟದಾಗಿ ಸುಟ್ಟ, ಸಂಪೂರ್ಣ ಹರಿದ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ. ಆರ್ ಬಿ ಐ ನಿಯಮಗಳ ಪ್ರಕಾರ, 1 ರೂಪಾಯಿಯಿಂದ 20 ರೂಪಾಯಿವರೆಗಿನ ನೋಟುಗಳ ವಿನಿಮಯದ ವೇಳೆ ಸಂಪೂರ್ಣ ಹಣವನ್ನು ನೀಡಬೇಕು. 50 ರಿಂದ 2000 ರೂಪಾಯಿಗಳ ನೋಟಿನಲ್ಲಿ ಅರ್ಧದಷ್ಟು ಹಣ ನೀಡಲು ಅವಕಾಶವಿದೆ.