ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ.
ತಂದೆ– ತಾಯಿ ಮಕ್ಕಳ ಸುಳ್ಳನ್ನು ಕಂಡು ಹಿಡಿದು, ಅವರಿಗೆ ಬುದ್ದಿ ಹೇಳಬೇಕು. ಮಕ್ಕಳು ತುಂಬಾ ಜಾಗರೂಕತೆಯಿಂದ ಸುಳ್ಳು ಹೇಳ್ತಾರೆ. ಆದರೆ ಅದನ್ನು ಈ ಕೆಳಗಿನ ಆಧಾರಗಳ ಮೇಲೆ ಕಂಡು ಹಿಡಿಯಬಹುದು.
ಮಕ್ಕಳು ಸುಳ್ಳು ಹೇಳುವಾಗ ತಲೆ ತಗ್ಗಿಸಿ ಹೇಳ್ತಾರೆ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ವಿಷಯ ಹೇಳಿಲ್ಲ ಎಂದರೆ ಅದು ಸುಳ್ಳು ಎಂದು ನೀವು ಭಾವಿಸಿ, ತನಿಖೆ ಶುರು ಮಾಡಬಹುದು.
ಮಕ್ಕಳು ಸುಳ್ಳು ವಿಷಯವನ್ನು ಪದೇ ಪದೇ ಹೇಳ್ತಾರೆ. ಪದೇ ಪದೇ ಹೇಳಿದ್ರೆ ಸುಳ್ಳು ಸತ್ಯವಾಗುತ್ತೆ ಎಂಬ ಭರವಸೆ ಅವರದ್ದು.
ಮಾತನಾಡುವಾಗ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಲ್ಲಿ ವಿಚಾರಣೆ ಮಾಡಬಹುದು.
ಮಾತನಾಡುವಾಗ ಕಣ್ಣು ರೆಪ್ಪೆ ಅತಿ ಹೆಚ್ಚು ಬಾರಿ ಮಿಣುಕುತ್ತಿದ್ದರೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅರ್ಥ.