ಪೆಟ್ರೋಲ್ ಬೆಲೆ ಸೆಂಚುರಿ ದಾಟಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಬಹುತೇಕರು ಪರ್ಯಾಯ ವಾಹನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳತ್ತ ವಾಲುತ್ತಿದ್ದಾರೆ. ಅಂಪೇರ್, ಒಕಿನಾವಾ, ಅಥೆರ್, ಪ್ಯೂರ್ ಇವಿ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‍ಗಳ ವಿವಿಧ ಮಾಡೆಲ್ ಗಳು ರಸ್ತೆಗಳಲ್ಲಿ ಕಾಣಬಹುದು.
ಆದರೆ, ಬಾಡಿಗೆಗೆ ಟ್ಯಾಕ್ಸಿ ಸೇವೆಯನ್ನು ಆ್ಯಪ್ ಮೂಲಕ ಒದಗಿಸಿ ದೇಶಾದ್ಯಂತ ಹೆಸರುವಾಸಿ ಆಗಿರುವ ‘ಒಲಾ’ ಕಂಪನಿಯು ತನ್ನದೇ ವಿಶಿಷ್ಟ ಎಸ್1 ಹಾಗೂ ಎಸ್1 ಪ್ರೋ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ರಸ್ತೆಗಿಳಿಸುತ್ತಿದೆ. ವಿಶಿಷ್ಟ ವಿನ್ಯಾಸದ ಈ ಸ್ಕೂಟರ್ ಗಳ ಫೋಟೊಗೆ ಮತ್ತು ಅದರ ಚಾರ್ಜಿಂಗ್, ದೀರ್ಘಾವಧಿ ಪ್ರಯಾಣ ಸಾಮರ್ಥ್ಯಕ್ಕೆ ಈಗಾಗಲೇ ಜನರು ಮರುಳಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಸ್ಕೂಟರ್ ಗಳಿಗೆ ಮುಂಗಡ ಪಾವತಿ ಕೂಡ ಆಗಿದೆ.
ಈ ಬಾರಿ ಸಲ್ಮಾನ್ ಮನೆಯಲ್ಲಿ ಕಳೆಗುಂದಲಿದೆ ಗಣೇಶ ಚತುರ್ಥಿ ಸಂಭ್ರಮ..!
ಆನ್‍ಲೈನ್‍ನಲ್ಲಿ ಮಾತ್ರವೇ ಸ್ಕೂಟರ್ ಬುಕ್ ಮಾಡಲು ಸದ್ಯ ಕಂಪನಿ ಅವಕಾಶ ನೀಡಿದೆ. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟು…..
– ಮೊದಲು ವೆಬ್‍ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಿರಿ.
– ಎಸ್1 ಅಥವಾ ಎಸ್1 ಪ್ರೊ ಮಾಡೆಲ್‍ಗಳ ಮಧ್ಯೆ ಆಯ್ಕೆ ಮಾಡಿರಿ. ನಿಮ್ಮ ನೆಚ್ಚಿನ ಬಣ್ಣವನ್ನು ಕೂಡ ಆಯ್ಕೆ ಮಾಡಿರಿ.
– ಎಚ್‍ಡಿಎಫ್‍ಸಿ, ಟಾಟಾ ಕ್ಯಾಪಿಟಲ್ ಸೇರಿದಂತೆ ಹಲವು ಬ್ಯಾಂಕ್ , ಹಣಕಾಸು ಸಂಸ್ಥೆಗಳಿಂದ ಒಲಾ ಸ್ಕೂಟರ್ ಗಳಿಗೆ ಸಾಲದ ಸೇವೆ ಸಿಗಲಿದೆ. ಎಸ್1 ಗೆ 2,999 ರೂ.ಗಳಿಂದ ಇಎಂಐ ಶುರುವಾದರೆ, ಎಸ್1 ಪರೊಗೆ 3,199 ರೂ. ಗಳಿಂದ ಇಎಂಐ ಆರಂಭವಾಗಲಿದೆ.
– ಸಾಲ ಬೇಡವಾದವರು ಮುಂಗಡ ಹಣವಾಗಿ 20-25 ಸಾವಿರ ರೂ. ಕೂಡ ಪಾವತಿಸಬಹುದು. ಅಂತಿಮವಾದ ಮೇಲೆ ಬಾಕಿ ಮೊತ್ತವನ್ನು ಸ್ಕೂಟರ್ ಡೆಲಿವರಿ ವೇಳೆ ಪಾವತಿಸಬೇಕಾಗುತ್ತದೆ.
– ಡೌನ್ ಪೇಮೆಂಟ್ ಮತ್ತು ಮುಂಗಡ ಹಣವು ಕಂಪನಿಯ ಜತೆಗಿನ ಸೂಕ್ತ ಸಮಾಲೋಚನೆ ಬಳಿಕ ಹಿಂಪಡೆಯಲು ಕೂಡ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ https://olaelectric.com/ ಈ ವೆಬ್‍ಸೈಟ್ ನೋಡಿರಿ.