ರೇಷನ್ ಕಾರ್ಡ್, ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಪಡಿತರ ಚೀಟಿ ಮೂಲಕ ಸರ್ಕಾರ, ತನ್ನ ರಾಜ್ಯದಲ್ಲಿ ನೆಲೆಸಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ರೇಷನ್ ಕಾರ್ಡ್ನ್ನ ಅನೇಕ ಸ್ಥಳಗಳಲ್ಲಿ ಐಡಿ ಪ್ರೂಫ್ ಆಗಿ ಬಳಸಲಾಗುತ್ತದೆ. ಭಾರತದ ಪೌರತ್ವ ಹೊಂದಿರುವ ದೇಶದ ಪ್ರತಿಯೊಬ್ಬ ನಾಗರಿಕರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರನ್ನು ಪೋಷಕರ ಪಡಿತರ ಚೀಟಿಯಲ್ಲಿ ಸೇರಿಸಲಾಗುತ್ತದೆ. 18 ವರ್ಷಕ್ಕಿಂತ ಹೆಚ್ಚಿದ್ದವರು ಪ್ರತ್ಯೇಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಎರಡು ವಿಧದ ಪಡಿತರ ಚೀಟಿಗಳಿವೆ.
ಪಡಿತರ ಚೀಟಿ ಅರ್ಜಿಯನ್ನು ಹತ್ತಿರದ ಪಡಿತರ ಕಚೇರಿಯಿಂದ ಪಡೆಯಬಹುದು. ಆಹಾರ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ರಾಜ್ಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ರಾಜ್ಯದ ವೆಬ್ಸೈಟ್ ನಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲು ಹೇಳಿದಂತೆ ಎರಡು ವಿಧದ ಪಡಿತರ ಚೀಟಿಯಿದೆ. ಮೊದಲು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಇನ್ನೊಂದು ಬಡತನ ರೇಖೆಗಿಂತ ಮೇಲಿರುವ ಜನರಿಗಾಗಿ ಬೇರೆ ಬೇರೆ ಪಡಿತರ ಚೀಟಿ ಲಭ್ಯವಿದೆ.Https://nfsa.gov.in/portal/apply_ration_card ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಡಿತರ ಚೀಟಿ ಪಡೆಯಬಹುದು.
ಪಡಿತರ ಚೀಟಿಗಾಗಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳನ್ನು ನೀಡಬೇಕು. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿಯನ್ನು ಹತ್ತಿರದ ಕಚೇರಿಗೆ ನೀಡಬೇಕು. 15 ದಿನಗಳ ನಂತರ ಪಡಿತರ ಚೀಟಿ ಮನೆಗೆ ಬರುತ್ತದೆ.
ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿಳಾಸ ಪುರಾವೆ, ಕುಟುಂಬದ ಮುಖ್ಯಸ್ಥರ ಪಾಸ್ಪೋರ್ಟ್ ಗಾತ್ರದ ಫೋಟೋ, ವಿದ್ಯುತ್ ಅಥವಾ ನೀರು ಅಥವಾ ದೂರವಾಣಿ ಬಿಲ್ ನೀಡಬೇಕು.