ಬೆಂಗಳೂರು : ರಾಜ್ಯ ಸರ್ಕಾರವು ವಿಚ್ಚೇದಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಸಿಹಿಸುದ್ದಿ ನೀಡಿದ್ದು, ಮನಸ್ವಿನಿ ಯೋಜನೆಯಡಿ ಮಾಸಿಕ 500 ರೂ. ನೀಡಲು ಮುಂದಾಗಿದೆ.
40 ವರ್ಷದಿಂದ 64 ವರ್ಷದೊಳಗಿನ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲವಾಗಿ ನಿಲ್ಲಬೇಕೆಂಬ ಉದ್ದೇಶದೊಂದಿಗೆ 2013ರಲ್ಲಿ ಕಾಂಗ್ರೆಸ್ ಸರ್ಕಾರವು ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿತ್ತು.
ಬಡತನರೇಖೆಗಿಂತ ಕೆಳಗಿರುವ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಮಾಸಿಕ ರೂ.500 ಮಾಸಾಶನ ನೀಡುವ ಈ ಯೋಜನೆಗೆ ಪಸಕ್ತ ಬಜೆಟ್ ನಲ್ಲಿ ರೂ.138 ಕೋಟಿ ಅನುದಾನವನ್ನು ನೀಡಲಾಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಬಿಪಿಲ್ ಪಡಿತರಚೀಟಿ, ಇಲ್ಲದಿದ್ದಲ್ಲಿ ಆದಾಯ ಪ್ರಮಾಣ ಪತ್ರ
- ಚುನಾವಣಾಗುರುತಿನಚೀಟಿ ಅಥವಾ ವಿಳಾಸದ ಬಗ್ಗೆ ದೃಢೀಕರಣ ದಾಖಲೆ/ವಯಸ್ಸಿನ ಬಗ್ಗೆ ದೃಢೀಕರಣ ಪತ್ರ.
- ಅವಿವಾಹಿತರುತಮಗೆವಿವಾಹ ಆಗಿಲ್ಲದಿರುವ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ
- ವಿವಾಹವಿಚ್ಚೇದಿತರುವಿಚ್ಚೇದನದ ಸ್ವಯಂ ಘೋಷಿತ ಪ್ರಮಾಣ ಪತ್ರ
- ಬ್ಯಾಂಕ್ ಮತ್ತುಅಂಚೆಖಾತೆ ವಿವರಗಳು
- ಆಧಾರ್ ಕಾರ್ಡ್
ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.